ನಿಮಗೆ ಪದೇ ಪದೇ ಹಸಿವಾಗುತ್ತಾ….? ಇದನ್ನು ಓದಿ

ಈಗಷ್ಟೇ ಊಟ ಆಗಿದೆ, ಆದ್ರೂ ಯಾಕೋ ಹೊಟ್ಟೆ ತುಂಬಿದಂಗೆ ಕಾಣ್ತಾ ಇಲ್ಲ, ಏನಾದ್ರೂ ತಿಂಡಿ ತಿನ್ನೋಣ ಅಂತಾ ಫ್ರಿಡ್ಜ್ ನಲ್ಲಿ ಹುಡುಕಾಡುವವರೇ ಹೆಚ್ಚು. ಭೂರಿ ಭೋಜನದ ನಂತರವೂ ಹೊಟ್ಟೆಯಲ್ಲಿ ತಳಮಳ ಶುರುವಾಗೋದಿಕ್ಕೆ ಹಲವು ಕಾರಣಗಳಿವೆ.

ಟಿವಿ/ಸಿನಿಮಾ: ಟಿವಿ ನೋಡ್ತಾ ಕುರುಕಲು ತಿಂಡಿ ತಿನ್ನೋದು ಕಾಮನ್ ಹವ್ಯಾಸ. ಅದರ ಬದಲು ಬೇರೆ ಏನಾದರೂ ಕೆಲಸ ಮಾಡುತ್ತ ನಿಮ್ಮ ಕೈಗಳನ್ನು ಬ್ಯುಸಿಯಾಗಿಡಿ. ಕರಿದ ತಿಂಡಿ ತಿನ್ನುವ ಬದಲು ಹರ್ಬಲ್ ಚಹಾ ಅಥವಾ ಜ್ಯೂಸ್ ಕುಡಿಯಬಹುದು.

ಹಸಿವು ಎಂಬ ತಪ್ಪು ಭಾವನೆ : ದೇಹದಲ್ಲಿನ ಡಿಹೈಡ್ರೇಶನ್ ನಿಂದ ನಿಮಗೆ ಹಸಿವಾಗುತ್ತಿದೆ ಎಂಬ ಭಾವನೆ ಮೂಡುತ್ತದೆ. ಪ್ರತಿದಿನ 6-8 ಗ್ಲಾಸ್ ನೀರು ಕುಡಿಯಿರಿ. ತಿಂಡಿ ತಿನ್ನಲು ಧಾವಿಸುವ ಮುನ್ನ ನಿಮಗೆ ಬಾಯಾರಿಕೆ ಆಗಿದೆಯೇ ಅನ್ನೋದನ್ನುಗಮನಿಸಿ.

ನಿದ್ದೆಯ ಕೊರತೆ: ಅಗತ್ಯವಿರುವಷ್ಟು ನಿದ್ದೆಯಾಗದೇ ಇದ್ದಲ್ಲಿ ನಿಮಗೆ ಪದೇ ಪದೇ ಏನನ್ನಾದರೂ ತಿನ್ನಬೇಕು ಎನಿಸುತ್ತದೆ. ಇದಕ್ಕೆ ಕಾರಣ ಲೆಪ್ಟಿನ್ ಮತ್ತು ಗ್ರೆಲಿನ್ ಹಾರ್ಮೋನ್ ಗಳು. ಹೊಟ್ಟೆ ತುಂಬಿದೆ ಅನ್ನೋದನ್ನು ಲೆಪ್ಟಿನ್ ತಿಳಿಸುತ್ತದೆ. ಸರಿಯಾಗಿ ನಿದ್ದೆ ಮಾಡದೇ ಇದ್ದಾಗ ಲೆಪ್ಟಿನ್ ಕಾರ್ಯ ನಿರ್ವಹಿಸುವುದಿಲ್ಲ.

ರಿಫೈನ್ಡ್ ಕಾರ್ಬೋಹೈಡ್ರೇಡ್: ರಿಫೈನ್ಡ್ ಆಹಾರಗಳಲ್ಲಿ ಸಕ್ಕರೆ ಕಾರ್ಬೋಹೈಡ್ರೇಡ್ ಪ್ರಮಾಣ ಹೆಚ್ಚಾಗಿರುತ್ತದೆ. ಅವು ಸಕ್ಕರೆಯಾಗಿ ಒಡೆದು ನಮ್ಮ ರಕ್ತಗಳಲ್ಲಿ ಸೇರುತ್ತವೆ. ಪಾಸ್ತಾ, ಬ್ರೆಡ್ ನಂತಹ ತಿನಿಸುಗಳನ್ನು ತಿಂದಾಗ ಸಕ್ಕರೆಯ ಪ್ರಮಾಣ ಹೆಚ್ಚುತ್ತದೆ. ನಮ್ಮ ದೇಹ ಇನ್ಸುಲಿನ್ ರಿಲೀಸ್ ಮಾಡಿ ಸಕ್ಕರೆ ಕೋಶಗಳೊಳಗೆ ಹೋಗಲು ಸಹಾಯ ಮಾಡುತ್ತದೆ. ಬಳಿಕ ಇದ್ದಕ್ಕಿದ್ದಂತೆ ಸಕ್ಕರೆ ಪ್ರಮಾಣ ಕುಸಿಯುವುದರಿಂದ ಹಸಿವು ಕಾಣಿಸಿಕೊಂಡು ನಾವು ಮತ್ತೆ ಸಿಹಿ ತಿಂಡಿ ಮತ್ತು ರಿಫೈನ್ಡ್ ಫುಡ್ ಸೇವಿಸಲು ಮುಂದಾಗುತ್ತೇವೆ.

ಮಾರ್ಕೆಟಿಂಗ್/ಅಡ್ವರ್ಟೈಸಿಂಗ್: ನಮ್ಮ ಮನಸ್ಸನ್ನು ಗೆಲ್ಲುವ ಲಾಜಿಕ್ ಆಹಾರ ಸಂಸ್ಥೆಗಳಿಗೆ ಚೆನ್ನಾಗಿ ಗೊತ್ತಿದೆ. ಹೆಚ್ಚಾಗಿ ಸಂಜೆ ವೇಳೆ ಟಿವಿಯಲ್ಲಿ ಜಾಹೀರಾತು ಬರುತ್ತದೆ. ನಮ್ಮ ಗಮನ ಸೆಳೆಯಲು ಬಸ್ ನಿಲ್ದಾಣಗಳಲ್ಲಿ ಜಾಹೀರಾತು ಸರ್ವೇಸಾಮಾನ್ಯ. ಅದನ್ನು ನೋಡಿದಾಗ ನಿಮ್ಮಲ್ಲಿ ಹಸಿವು ಭುಗಿಲೇಳುತ್ತೆ.

ಉತ್ಕಂಠತೆ: ಮೆಮೊರಿ ನಿಮ್ಮಲ್ಲಿ ಹಸಿವಿನ ಭಾವನೆ ಉಂಟುಮಾಡಬಹುದು. ಚಿಕ್ಕಂದಿನಲ್ಲಿ ಅತ್ತಾಗಲೆಲ್ಲ ಸಿಹಿ ತಿಂದಿದ್ದರೆ, ಈಗಲೂ ಬೇಸರವಾದಾಗಲೆಲ್ಲ ಸಿಹಿ ತಿನಿಸು ತಿನ್ನಬೇಕೆನಿಸುತ್ತದೆ.

ಋತುಚಕ್ರದಲ್ಲಿನ ವ್ಯತ್ಯಾಸ: ಅಂಡೋತ್ಪತ್ತಿಯ ನಂತರ ಮತ್ತು ಋತುಚಕ್ರದ ಉತ್ತರಾರ್ಧದಲ್ಲಿ ಮಹಿಳೆಯರಲ್ಲಿ ಹಸಿವು ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ನೀವು ಪೋಷಕಾಂಶವುಳ್ಳ ಆಹಾರ ಸೇವಿಸಬೇಕು. ಕೆಫಿನ್ ಹಾಗೂ ಅಲ್ಕೋಹಾಲ್ ಸೇವನೆಯಿಂದ ನಿಮ್ಮ ಹಾರ್ಮೋನ್ ಅಸಮತೋಲನವುಂಟಾಗುವ ಸಾಧ್ಯತೆಯಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read