ಊಟವಾದ ನಂತರ ಹೊಟ್ಟೆ ಉಬ್ಬರಿಸ್ತಾ ಇದೆಯಾ….? ಹಾಗಾದ್ರೆ ಇವುಗಳನ್ನು ತಿನ್ನಬೇಡಿ

ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ ಈಗ ಎಲ್ಲರಿಗೂ ಉದರ ಬಾಧೆ ಸಾಮಾನ್ಯವಾಗಿಬಿಟ್ಟಿದೆ. ಮಧ್ಯಾಹ್ನ ಊಟವಾದ ಮೇಲೆ ಹೊಟ್ಟೆ ಉಬ್ಬರಿಸೋದು, ಗ್ಯಾಸ್ಟ್ರಿಕ್‌, ಅಜೀರ್ಣ ಇವೆಲ್ಲವೂ ಸಮಸ್ಯೆಯಾಗಿ ಕಾಡುತ್ತದೆ. ಈ ರೀತಿ ಹೊಟ್ಟೆ ಉಬ್ಬರಿಸಿದಾಗ ಹೊಟ್ಟೆ ನೋವು ಕೂಡ ಬರುತ್ತದೆ.

ಅಂತಹ ಪರಿಸ್ಥಿತಿಯಲ್ಲಿ ಸ್ವಲ್ಪ ಕಾಳಜಿ ವಹಿಸಿದರೆ ಸಮಸ್ಯೆಯನ್ನು ತ್ವರಿತವಾಗಿ ನಿವಾರಿಸಬಹುದು. ಇಲ್ಲಿ ಪಟ್ಟಿ ಮಾಡಿರುವ ನಾಲ್ಕು ಆಹಾರಗಳನ್ನು ತಿನ್ನದೇ ಇದ್ದರೆ ಬ್ಲೋಟಿಂಗ್‌ ನಿಯಂತ್ರಣಕ್ಕೆ ಬರುತ್ತದೆ.

ಬ್ರೊಕೊಲಿ : ನಿಮಗೆ ಹೊಟ್ಟೆ ಉಬ್ಬರಿಸುವ ಸಮಸ್ಯೆ ಇದ್ದರೆ ಬ್ರೊಕೊಲಿಯನ್ನು ಸೇವಿಸಬೇಡಿ. ಬ್ರೊಕೊಲಿ ಸುಲಭವಾಗಿ ಜೀರ್ಣವಾಗುವುದಿಲ್ಲ. ಇದರಿಂದಾಗಿ ಹೊಟ್ಟೆ ಉಬ್ಬರಿಸುವ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು.

ಸೇಬು : ಗ್ಯಾಸ್ಟ್ರಿಕ್‌ ನಿಂದ ಹೊಟ್ಟೆ ಉಬ್ಬರಿಸ್ತಾ ಇದ್ರೆ ಸೇಬು ಹಣ್ಣು ತಿನ್ನಬೇಡಿ. ಸೇಬು ಹಣ್ಣಿನಲ್ಲಿ ಫೈಬರ್‌ ಅಂಶ ಹೇರಳವಾಗಿದೆ. ಇದು ಗ್ಯಾಸ್ಟ್ರಿಕ್‌ ಸಮಸ್ಯೆಯನ್ನು ಜಾಸ್ತಿ ಮಾಡುತ್ತದೆ. ಹಾಗಾಗಿ ಹೊಟ್ಟೆ ನೋವು ಕೂಡ ಹೆಚ್ಚಾಗಬಹದು.

ಬೆಳ್ಳುಳ್ಳಿ : ಬೆಳ್ಳುಳ್ಳಿ ಉಬ್ಬುವಿಕೆಯ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಬ್ಲೋಟಿಂಗ್‌ ನಲ್ಲಿ ಫ್ರುಕ್ಟಾನ್‌ಗಳು ಕಂಡುಬರುತ್ತವೆ. ಹಾಗಾಗಿ ಬೆಳ್ಳುಳ್ಳಿ ತಿನ್ನುವುದರಿಂದ ಬ್ಲೋಟಿಂಗ್‌ ಹೆಚ್ಚಾಗುತ್ತದೆ.

ಬೀನ್ಸ್ : ಬೀನ್ಸ್‌ ನಲ್ಲಿ ಫೈಬರ್‌ ಅಂಶ ಹೆಚ್ಚಾಗಿದೆ. ಹಾಗಾಗಿ ಇದನ್ನು ತಿಂದರೆ ಹೊಟ್ಟೆ ಉಬ್ಬರ ಸಮಸ್ಯೆ ಹೆಚ್ಚಾಗಬಹುದು. ಹಾಗಾಗಿ ಬ್ಲೋಟಿಂಗ್‌ ಇದ್ದರೆ ಬೀನ್ಸ್‌ ತಿನ್ನಬೇಡಿ. ಬೀನ್ಸ್‌ ಸಾಂಬಾರ್‌, ಪಲ್ಯ ಇವನ್ನೆಲ್ಲ ಅವಾಯ್ಡ್‌ ಮಾಡುವುದು ಉತ್ತಮ. ಯಾಕಂದ್ರೆ ಇದು ಅತಿಸಾರಕ್ಕೂ ಕಾರಣವಾಗಬಹುದು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read