ನೀವು ಕೂದಲಿಗೆ ಬಣ್ಣ ಹಚ್ಚಿಕೊಳ್ತೀರಾ….?

ಇಂದಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲೆ ಕೂದಲು ಬೆಳ್ಳಗಾಗುವುದು ಸಾಮಾನ್ಯವಾಗಿದೆ. ಅದನ್ನು ಸರಿಪಡಿಸಲು ಈಗ ಮಾರುಕಟ್ಟೆಯಲ್ಲಿ ವಿಧ ವಿಧವಾದ ಹೇರ್ ಡೈ ಗಳು ಲಭ್ಯವಿದೆ.

ಆದರೆ ನೀವು ಹೇರ್ ಡೈ ಮಾಡಿಕೊಳ್ಳುವಾಗ ಉತ್ತಮ ಗುಣಮಟ್ಟದ, ಒಳ್ಳೆಯ ಫಲಿತಾಂಶ ನೀಡುವ ಕಂಪನಿಯ ಹೇರ್ ಡೈ ಆಯ್ಕೆ ಮಾಡಿಕೊಳ್ಳಿ. ಹೇರ್ ಡೈ ಮಾಡುವ ಮುನ್ನ ಸ್ವಲ್ಪವಷ್ಟೇ ಕಲೆಸಿ ನಿಮ್ಮ ಕಿವಿಯ ಪಕ್ಕದಲ್ಲಿ ಹಚ್ಚಿ. ಕೆಲ ಸಮಯದ ನಂತರ ಪರೀಕ್ಷಿಸಿ. ನಿಮಗೆ ಆ ಭಾಗದಲ್ಲಿ ತುರಿಕೆ ಕಾಣಿಸಿಕೊಳ್ಳದಿದ್ದರೆ ಆ ಹೇರ್ ಡೈ ಅನ್ನು ಬಳಸಿ.

ನಿಮ್ಮ ಕೂದಲಿಗೆ ಸರಿ ಹೊಂದುವ ಕಲರ್ ಆಯ್ಕೆ ಮಾಡಿ ಪಿಂಗಾಣಿ, ಗಾಜಿನ ಅಥವಾ ಪ್ಲಾಸ್ಟಿಕ್ ಬೌಲ್ ನಲ್ಲಿ ಹೇರ್ ಡೈ ಕಲೆಸಿ, ತಕ್ಷಣ ಅದನ್ನು ಬಳಸಿ. ಹಚ್ಚುವಾಗ ಕಿವಿ, ಕುತ್ತಿಗೆ ಇನ್ನಿತರ ಭಾಗಗಳಿಗೆ ಬೀಳದಂತೆ ಬಳಸಿ. ಹಾಗೆ ಹೆಚ್ಚುವರಿಯಾಗಿ ಅಂಟಿರುವ ಕಲರ್ ಅನ್ನು ಹಸಿ ಇರುವಾಗಲೇ ಕಾಟನ್ ನಿಂದ ತೆಗೆಯಿರಿ. ಡೈ ನ್ನು ಹಚ್ಚಿ ಹೆಚ್ಚು ಸಮಯ ಬಿಡದೆ 45 ನಿಮಿಷದಿಂದ 1 ಗಂಟೆಯೊಳಗೆ ಸ್ನಾನ ಮಾಡಿ, ಸ್ನಾನದ ನಂತರ ಟವೆಲ್ ನಿಂದ ಕೂದಲನ್ನು ಚೆನ್ನಾಗಿ ಒರೆಸಿ ಒಣಗಿಸಿಕೊಳ್ಳಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read