ಊಟದ ಮಧ್ಯೆ ನೀರು ಕುಡೀತೀರಾ…..?

ಊಟದ ಮಧ್ಯೆ ನೀರು ಕುಡೀಬೇಡಿ ಅಂತ ನಿಮಗೆ ಯಾರಾದ್ರು ಸಲಹೆ ನೀಡ್ತಾರಾ…? ಊಟದ ಮಧ್ಯೆ ನೀರು ಕುಡಿಯೋದ್ರಿಂದ ದೇಹಕ್ಕೆ ತೊಂದರೆ ಇದೆ ಅಂತ ಹೇಳ್ತಾರಾ…? ಅವರು ಹಾಗೆ ಹೇಳಿದ ಮೇಲೆ ನಿಮಗೂ ಊಟದ ಮಧ್ಯೆ ನೀರು ಕುಡಿಯೋದು ಸರಿಯೋ ತಪ್ಪೋ ಅನ್ನೋ ಗೊಂದಲಕ್ಕೆ ಬಿದ್ದಿದ್ದೀರಾ…? ಚಿಂತೆ ಬೇಡ ನೀವು ಊಟದ ಮಧ್ಯೆ ಆರಾಮಾಗಿ ನೀರು ಕುಡಿಯಿರಿ. ಊಟದ ಮಧ್ಯೆ ನೀರು ಕುಡಿಯೋದ್ರಿಂದಾನೇ ಜೀರ್ಣಕ್ರಿಯೆ ಸುಲಭವಾಗಲಿದೆ ಅಂತಿದ್ದಾರೆ ವೈದ್ಯರು.

ಹೌದು. ಜೀರ್ಣಕ್ರಿಯೆಯನ್ನು ಸುಲಭಗೊಳಿಸೋಕೆ ಅತ್ಯವಶ್ಯಕವಾಗಿ ಬೇಕಾಗಿರೋದೇ ನೀರು. ಊಟದ ಮಧ್ಯೆ ನೀರು ಕುಡಿಯೋದ್ರಿಂದ ಜೀರ್ಣಕ್ರಿಯೆಯ ಪ್ರಕ್ರಿಯೆ ಸುಗಮವಾಗುತ್ತದೆ. ಆಹಾರ ತಜ್ಞರ ಪ್ರಕಾರ ಊಟದ ಮಧ್ಯೆ ನೀರು ಕುಡಿಯೋದ್ರಿಂದ ಯಾವುದೇ ರೀತಿಯಲ್ಲೂ ತೊಂದರೆ ಇಲ್ಲ. ಊಟದ ಮಧ್ಯೆ ನೀರು ಕುಡಿಯದೆ ಇರೋದ್ರಿಂದಲೂ ತೊಂದರೆ ಇದೆ ಅಂತ ಅಲ್ಲ. ಊಟದ ಸಮಯದಲ್ಲಿ ನಮ್ಮೆಲ್ಲರ ದೇಹ ಕಿಣ್ವಗಳು ಸೇರಿದಂತೆ ಹಲವು ಜೀವ ರಸಾಯನಿಕ ದ್ರವಗಳನ್ನ ಬಿಡುಗಡೆ ಮಾಡುತ್ತದೆ. ಅದರಿಂದ ಚಯಾಪಚಯ ಕ್ರಿಯೆ ಸರಾಗವಾಗಿ ನಡೆಯಲಿದೆ.

ಊಟದ ಮಧ್ಯೆ ನೀರು ಕುಡಿಯೋದ್ರಿಂದ ಈ ಜೀರ್ಣಕ್ರಿಯೆ ಇನ್ನಷ್ಟು ಸರಳವಾಗಲಿದೆ. ಕೆಲ ಘನ ಪದಾರ್ಥಗಳನ್ನು ಜೀರ್ಣಿಸಿಕೊಳ್ಳೋದಕ್ಕೆ ಊಟದ ಮಧ್ಯೆ ನೀರು ಕುಡಿಯಲೇಬೇಕು. ಆಯುರ್ವೇದ ಪಂಡಿತರು ಹೇಳುವ ಪ್ರಕಾರ ಊಟದ ಮಧ್ಯೆ ನೀರು ಕುಡಿಯೋದ್ರಿಂದ ಯಾವುದೇ ಸಮಸ್ಯೆ ಇಲ್ಲ. ಆದ್ರೆ ಊಟಕ್ಕೆ ಮೊದಲು ಊಟವಾದ ತಕ್ಷಣ ನೀರು ಕುಡಿಯೋದು ಕೊಂಚ ಅವಾಯ್ಡ್ ಮಾಡಿದ್ರೆ ಒಳ್ಳೆಯದು ಅಂತಾರೆ. ಊಟದ ಮಧ್ಯೆ ನೀರು ಕುಡಿಯೋದ್ರಿಂದ ಜೀರ್ಣಕ್ರಿಯೆಯೂ ಬೇಗನೆ ಆಗುತ್ತದೆಯಂತೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read