ಪ್ರೀತಿ ಹಾಗೂ ʼಆರ್ಥಿಕʼ ವೃದ್ಧಿಗೆ ಶಿವಲಿಂಗದ ಬಳಿ ಈ ಕೆಲಸ ಮಾಡಿ

ಭಗವಂತ ಶಿವನನ್ನು ಆರಾಧನೆ ಮಾಡಿದ್ರೆ ಶೀಘ್ರವೇ ಸಂಕಷ್ಟ ದೂರವಾಗುತ್ತದೆ ಎಂದು ನಂಬಲಾಗಿದೆ. ಭಗವಂತ ಶಿವ ಬಹು ಬೇಗ ಭಕ್ತರ ಕರೆಗೆ ಮಣಿಯುತ್ತಾನೆ. ಭಕ್ತ ಬೇಡಿದ್ದನ್ನು ಶಿವ ನೀಡುತ್ತಾನೆಂಬ ನಂಬಿಕೆಯಿದೆ.

ಬೇಗ ಭಗವಂತ ಶಿವನನ್ನು ಒಲಿಸಿಕೊಳ್ಳಬೇಕಾದ್ರೆ ಈ ಸುಲಭ ಉಪಾಯವನ್ನು ಅನುಸರಿಸಿ. ಬೇರೆ ಬೇರೆ ಕೆಲಸಕ್ಕೆ ಬೇರೆ ಬೇರೆ ದೇವರನ್ನು ಆರಾಧನೆ ಮಾಡಬೇಕಾಗುತ್ತದೆ.

ಕೌಟುಂಬಿಕ ಸಮಸ್ಯೆಯಿಂದ ಬಳಲುತ್ತಿರುವವರು ಶಿವನ ಆರಾಧನೆ ಜೊತೆಗೆ ಶಿವ ಲಿಂಗಕ್ಕೆ ಕುಂಕುಮ, ಅರಿಶಿನ, ಬಳೆ, ಕೆಂಪು ಸೀರೆ, ಕೆಂಪು ಗುಲಾಬಿಯನ್ನು ಅರ್ಪಿಸಿ.

ದೌರ್ಭಾಗ್ಯ ದೂರ ಮಾಡಲು ಶಿವಲಿಂಗದ ಬಳಿ ತುಪ್ಪದ ದೀಪವನ್ನು ಹಚ್ಚಿ. ‘ಓಂ ನಮಃ ಶಿವಾಯ’ ಮಂತ್ರವನ್ನು 108 ಬಾರಿ ಪಠಿಸಿ. ಜೊತೆಗೆ ಹನುಮಾನ್ ಚಾಲೀಸ್ ಓದಿ.

ಮನೆಯಲ್ಲಿ ಸದಾ ಸಂತೋಷ ನೆಲೆಸಿರಬೇಕೆಂದ್ರೆ ಗಣೇಶನ ಪೂಜೆ ಮಾಡಿ. ಗಣೇಶನನ್ನು ತೃಪ್ತಿಗೊಳಿಸಲು ಆನೆಗೆ ಕಬ್ಬನ್ನು ನೀಡಿ.

ಕಾರ್ಯ ಸಿದ್ಧಿಗಾಗಿ ಸಿಹಿ ಪಾನ್, ಸಿಂಧೂರ, ಮಲ್ಲಿಗೆ ಎಣ್ಣೆಯನ್ನು ದಾನ ನೀಡಿ. ನಂತ್ರ ದೀಪ ಬೆಳಗಿ ‘ಓಂ ರಾಮದೂತಾಯ ನಮಃ’ ಮಂತ್ರವನ್ನು 108 ಬಾರಿ ಪಠಿಸಿ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read