ಜೋತು ಬಿದ್ದಿರುವ ಹೊಟ್ಟೆಯ ಚರ್ಮ ಟೈಟ್ ಆಗಬೇಕೆಂದರೆ ಹೀಗೆ ಮಾಡಿ

ಗಭಾವಸ್ಥೆಯಲ್ಲಿ ನಿಮ್ಮ ಹೊಟ್ಟೆಯ ಭಾಗ ವಿಸ್ತರಿಸುತ್ತದೆ. ಆ ವೇಳೆ ನಿಮ್ಮ ಹೊಟ್ಟೆಯ ಚರ್ಮ ಕೂಡ ವಿಸ್ತರಿಸುತ್ತದೆ. ಹೆರಿಗೆಯ ಬಳಿಕ ಅದು ಜೋತು ಬೀಳುತ್ತದೆ.  ಈ ಚರ್ಮವನ್ನು ಮತ್ತೆ ಟೈಟ್ ಆಗಿಸಲು ಈ ಮನೆ ಮದ್ದನ್ನು ಬಳಸಿ.

*ಅಲೋವೆರಾ ಜೆಲ್ ಚರ್ಮವನ್ನು ಟೈಟ್ ಆಗಿಸುತ್ತದೆ. ಜೇನುತುಪ್ಪ ವಯಸ್ಸಾದ ಲಕ್ಷಣಗಳನ್ನು ನಿವಾರಿಸುತ್ತದೆ, ಹಾಗಾಗಿ ಅಲೋವೆರಾ ಜೆಲ್, ನಿಂಬೆ ರಸ, ಮತ್ತು ಜೇನುತುಪ್ಪ ಮೂರನ್ನು ಒಂದೊಂದು ಚಮಚದಷ್ಟು ತೆಗೆದುಕೊಂಡು 2 ಚಮಚ ಶುಂಠಿಯ ಪುಡಿಗೆ ಸೇರಿಸಿ ಮಿಶ್ರಣ ಮಾಡಿ ಹೊಟ್ಟೆಯ ಮೇಲೆ ಹಚ್ಚಿ. 20 ನಿಮಿಷ ಬಿಟ್ಟು ವಾಶ್ ಮಾಡಿ. ಇದು ಚರ್ಮವನ್ನು ಟೈಟ್ ಆಗಲು ಸಹಕರಿಸುತ್ತದೆ.

 *ಮೊಟ್ಟೆಯ ಬಿಳಿಭಾಗ, 2 ಚಮಚ ಸಮುದ್ರದ ಉಪ್ಪು, ½ ಚಮಚ ನಿಂಬೆ ರಸ ಬೆರೆಸಿ ಸ್ನಾನ ಮಾಡುವ ಮುನ್ನ ನಿಮ್ಮ ಹೊಟ್ಟೆಯ ಮೇಲೆ ಮಸಾಜ್ ಮಾಡಿ. ಮೊಟ್ಟೆ ಚರ್ಮವನ್ನು ಬಿಗಿಗೊಳಿಸುತ್ತದೆ. ಉಪ್ಪು ಸತ್ತಕೋಶಗಳನ್ನು ತೆಗೆದು ಹಾಕುತ್ತದೆ. ಇದರಿಂದ ಚರ್ಮ ಮೊದಲಿನಂತಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read