ಮೊಡವೆ ಕಲೆ ಹೋಗಲಾಡಿಸಲು ಹೀಗೆ ಮಾಡಿ

ಹದಿಹರೆಯದಲ್ಲಿ ಮಾತ್ರವಲ್ಲ, ಕೆಲವೊಮ್ಮೆ ಎಲ್ಲಾ ವಯೋಮಾನದವರಿಗೂ ಮೊಡವೆ ಸಮಸ್ಯೆ ಕಾಡುತ್ತದೆ. ಸಭೆ ಸಮಾರಂಭಗಳಿರುವಾಗಲೇ ಹೆಚ್ಚಾಗಿ ಕಾಡುವ ಈ ಮೊಡವೆ ಕಲೆ ರೂಪದಲ್ಲಿ ಉಳಿದುಕೊಂಡು ದೀರ್ಘ ಕಾಲ ಕಾಡುತ್ತದೆ. ಇದರ ನಿವಾರಣೆಗೆ ಹೀಗೆ ಮಾಡಿ.

ಶ್ರೀಗಂಧವನ್ನು ತೇಯ್ದು ಮುಖಕ್ಕೆ ಹಚ್ಚಿ. ಒಣಗಿದ ಬಳಿಕ ಮುಖ ತೊಳೆಯಿರಿ. ನಿತ್ಯ ಒಂದು ತಿಂಗಳ ತನಕ ರಾತ್ರಿ ಹಚ್ಚಿ ಮಲಗಿ ಬೆಳಿಗ್ಗೆ ತೊಳೆದುಕೊಂಡರೆ ಮೊಡವೆ ಕಲೆಗಳು ಬಹುತೇಕ ದೂರವಾಗುತ್ತದೆ.

ಇದೇ ವಿಧಾನದಲ್ಲಿ ರಕ್ತಚಂದನವನ್ನೂ ಹಚ್ಚಿಕೊಳ್ಳುವುದರಿಂದ ಮುಖ ಕಲೆಗಳು ಇಲ್ಲವಾಗುವುದರೊಂದಿಗೆ ತ್ವಚೆ ಹೊಳಪು ಪಡೆದುಕೊಳ್ಳುತ್ತದೆ. ನಂಜು ನಿರೋಧಕ ಗುಣ ಇರುವ ಮೆಂತೆಯನ್ನು ಅರ್ಧ ಗಂಟೆ ನೆನೆಸಿ. ಆ ನೀರನ್ನು ಕುದಿಸಿ. ಪದೇ ಪದೇ ಇದನ್ನು ಮುಖಕ್ಕೆ ಹಚ್ಚಿಕೊಂಡರೆ ಕಲೆ ದೂರವಾಗುತ್ತದೆ.

ನಿಂಬೆ ರಸಕ್ಕೆ ಜೇನು ಬೆರೆಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ. ಅರ್ಧ ಗಂಟೆ ಬಳಿಕ ತೊಳೆಯಿರಿ. ವಾರಕ್ಕೆರಡು ಬಾರಿ ಹೀಗೆ ಮಾಡಿದರೆ ನಿಮಗೆ ಫೇಶಿಯಲ್ ನ ಪರಿಣಾಮ ಸಿಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read