ಹೊಟ್ಟೆಯ ಭಾಗದಲ್ಲಿ ಸಂಗ್ರಹವಾಗಿರುವ ಬೊಜ್ಜು ಕರಗಲು ಹೀಗೆ ಮಾಡಿ……!

ಹೊಟ್ಟೆಯ ಭಾಗದಲ್ಲಿ ಹೆಚ್ಚು ಕೊಬ್ಬು ಸಂಗ್ರಹವಾಗಿರುವ ವ್ಯಕ್ತಿ ಬಹುಬೇಗ ಮಧುಮೇಹ ಸಮಸ್ಯೆಯಿಂದ ಬಳಲುತ್ತಾನೆ ಎಂಬುದನ್ನು ಅಧ್ಯಯನಗಳು ದೃಢಪಡಿಸಿವೆ. ಈ ಭಾಗದ ಕೊಬ್ಬು ಕರಗಿಸಲು ಊಟ ಬಿಟ್ಟು ಪ್ರಯೋಜನವಾಗದೆ ಕೈಚೆಲ್ಲುವವರೇ ಹೆಚ್ಚು.

ದೇಹದ ಹೊಟ್ಟೆಯ ಭಾಗದಲ್ಲಿ ಕೊಬ್ಬು ಸಂಗ್ರಹವಾಗಿದೆ ಎಂಬುದನ್ನು ತಿಳಿಯುತ್ತಲೇ ಈ ಕೆಲವು ಎಚ್ಚರಿಕೆಗಳನ್ನು ವಹಿಸಿ. ಅನಾವಶ್ಯಕವಾಗಿ ಜಂಕ್ ಫುಡ್ ಸೇವಿಸದಿರಿ. ವಾರದಲ್ಲಿ ಒಂದು ದಿನವನ್ನು ಮಾತ್ರ ಹೊರಗಿನ ಊಟಕ್ಕೆಂದು ಮೀಸಲಿಡಿ.

ತಜ್ಞರ ಅಭಿಪ್ರಾಯ ಪಡೆದುಕೊಳ್ಳಿ. ಜೀವನಶೈಲಿಯನ್ನು ಬದಲಾಯಿಸಿಕೊಳ್ಳಿ. ವ್ಯಾಯಾಮಕ್ಕೆಂದು ನಿಗದಿತ ಸಮಯ ಮೀಸಲಿಡಿ.

 ಡೈರಿ ಉತ್ಪನ್ನವಾದ ಮೊಸರು ನಿಮ್ಮ ಈ ಭಾಗದ ಕೊಬ್ಬನ್ನು ಕರಗಿಸುತ್ತದೆ. ಹೊಟ್ಟೆಯ ಸುತ್ತಲಿನ ಭಾಗದಲ್ಲಿ ಕೊಬ್ಬು ಸಂಗ್ರಹವಾಗದಂತೆ ನೋಡಿಕೊಳ್ಳುತ್ತದೆ.

ಬಾದಾಮಿ, ಗೋಡಂಬಿ, ಒಣಖರ್ಜೂರ ಮತ್ತು ವಾಲ್ನಟ್ ಗಳು ದೇಹ ತೂಕದ ನಿರ್ವಹಣೆ ಮಾಡುತ್ತದೆ. ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ನಿಯಮಿತವಾಗಿ ಇವುಗಳನ್ನು ಸೇವಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read