ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚಿಸಲು ಹೀಗೆ ಮಾಡಿ

ನಾವು ವಾಸಿಸುವ ಮನೆಯಲ್ಲಿ ನಮ್ಮ ಸಂತೋಷವಿರುತ್ತದೆ. ಅದನ್ನು ಸರಿಯಾಗಿ ಕಾಪಾಡಿಕೊಂಡರೆ ಅಪರಿಮಿತ ಆನಂದವನ್ನು ಅನುಭವಿಸಬಹುದು. ಕುಟುಂಬದ ಸದಸ್ಯರ ನಡುವೆ ಸಾಮರಸ್ಯ, ಮಾನಸಿಕವಾಗಿ ದೃಢವಾಗಿರುವುದು, ಆರೋಗ್ಯ ಸೇರಿದಂತೆ ಮನೆಯಲ್ಲಿ ಸಂತೋಷ ನೂರ್ಮಡಿಯಾಗಲು ಮನೆ ಸಕಾರಾತ್ಮಕವಾಗಿರಬೇಕು. ಈ ನಿಟ್ಟಿನಲ್ಲಿ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚಿಸಲು ಏನೆಲ್ಲಾ ಮಾಡಬೇಕು ನೋಡೋಣ ಬನ್ನಿ.

ಸೂರ್ಯನ ಬೆಳಕಿನ ಪ್ರವೇಶ : ನಿಮ್ಮ ದಿನ ಆರಂಭ ಸೂರ್ಯನೊಂದಿಗೆ ಆಗಲಿ. ಬೆಳಗಿನ ಸೂರ್ಯನ ಕಿರಣಗಳು ನಿಮ್ಮ ಮನೆ ಪ್ರವೇಶಿಸುವಂತೆ ನಿಮ್ಮ ಮನೆ ಇರಲಿ. ಆ ಮೂಲಕ ಸೂರ್ಯನ ಪ್ರಖರತೆ ನಿಮ್ಮ ಮನೆಯನ್ನು ಬೆಳಗುತ್ತದೆ.

ಬೇಡದ ವಸ್ತು ಗುರುತಿಸಿ : 6 ತಿಂಗಳಿಗಿಂತಲೂ ಹೆಚ್ಚಿನ ಸಮಯ ಬಳಸದೇ ಇರುವ ವಸ್ತುವನ್ನು ತೆಗೆದುಹಾಕಿ. ಆಗ ಆ ಜಾಗ ಧೂಳು ಕೂರುವ ಬದಲು ಶುಭ್ರವಾಗಿರುತ್ತದೆ. ಇದು ಸಕಾರಾತ್ಮಕತೆಯನ್ನು ಆಕರ್ಷಿಸುತ್ತದೆ.

ಗಿಡಗಳನ್ನು ಬೆಳೆಸಿ : ಇಂಡೋರ್​ ಪ್ಲ್ಯಾಂಟ್ಸ್​ಗಳನ್ನು ಮನೆಯೊಳಗೆ ಬೆಳೆಸಿ. ಹಸಿರು ನಿಮ್ಮ ಮನೆಯೊಳಗೆ ಇದ್ದರೆ ಅದು ಪ್ರಯೋಜನಕಾರಿ.

ಕಿಟಕಿಗಳನ್ನು ತೆರೆಯಿರಿ : ಸದಾ ಕಾಲ ಕತ್ತಲು ತುಂಬಿರುವ ಮನೆಯಲ್ಲಿ ಪ್ರೇರಣೆಯ ಕೊರತೆ ಇರುತ್ತದೆ. ಈ ನಿಟ್ಟಿನಲ್ಲಿ ಮನೆಯ ಕಿಟಕಿ ತೆಗೆದಿಟ್ಟರೆ, ಗಾಳಿ, ಬೆಳಕು ಸರಾಗವಾಗಿ ಹೊಮ್ಮುತ್ತದೆ. ಇದು ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚಿಸುತ್ತದೆ.

ಬಣ್ಣ : ನಿಮ್ಮ ಮನೆಗೆ ಪೇಯಿಂಟ್​ ಮಾಡಿ ಸಾಕಷ್ಟು ವರ್ಷಗಳಾಗಿದ್ದರೆ ಕೂಡಲೇ ಬಣ್ಣ ಹೊಡೆಸಿ. ಆ ಮೂಲಕ ಮನೆ ನೋಡಿದ ತಕ್ಷಣ ಮನಸ್ಸು ಪ್ರಫುಲ್ಲವಾಗುತ್ತದೆ. ಇದು ಮಾನಸಿಕ ಆರೋಗ್ಯ ಮತ್ತು ದೃಢತೆಯನ್ನು ಹೆಚ್ಚಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read