ಮಕ್ಕಳ ಹಸಿವು ಹೆಚ್ಚಬೇಕೆಂದ್ರೆ ಹೀಗೆ ಮಾಡಿ

ಆಹಾರ ಎಂದಾಕ್ಷಣ ಮಕ್ಕಳು ದೂರ ಓಡ್ತಾರೆ. ಆಹಾರ, ಊಟದ ವಿಷಯ ಬಂದಾಗ ಒಂದಲ್ಲ ಒಂದು ನೆಪ ಹೇಳಿ ಪಾಲಕರಿಂದ ತಪ್ಪಿಸಿಕೊಂಡು ಓಡ್ತಾರೆ. ಬದಲಾಗುತ್ತಿರುವ ಹವಾಮಾನ ಹಾಗೂ ಆಹಾರ ಪದ್ಧತಿಯೂ ಮಕ್ಕಳ ಹಸಿವನ್ನು ಕಡಿಮೆ ಮಾಡ್ತಾ ಇದೆ.

ಮಕ್ಕಳು ಕಡಿಮೆ ಆಹಾರ ಸೇವನೆ ಮಾಡಿದಲ್ಲಿ ಅದು ಅವರ ಬೆಳವಣಿಗೆಗೆ ಅಡ್ಡಿಯುಂಟು ಮಾಡುತ್ತದೆ. ದೇಹ ಶಕ್ತಿ ಕಳೆದುಕೊಂಡು ದುರ್ಬಲವಾಗುತ್ತದೆ. ಮಕ್ಕಳ ಈ ಸಮಸ್ಯೆಗೆ ಮನೆಯಲ್ಲಿಯೇ ಮದ್ದಿದೆ. ಕೆಲವೊಂದು ಆಹಾರಗಳನ್ನು ಮಕ್ಕಳಿಗೆ ನೀಡುವುದರಿಂದ ಮಕ್ಕಳ ಹಸಿವು ಜಾಸ್ತಿಯಾಗುತ್ತದೆ.

ಸೇಬು: ಮಕ್ಕಳಿಗೆ ಹಸಿವಾಗ್ತಿಲ್ಲ ಎಂದಾದ್ರೆ ಸೇಬು ಹಣ್ಣನ್ನು ತಿನ್ನಲು ಕೊಡಿ. ಇದ್ರಿಂದ ಮಕ್ಕಳ ರಕ್ತ ಶುದ್ಧವಾಗುವುದಲ್ಲದೆ ಹಸಿವಾಗುತ್ತದೆ. ಸೇಬು ಹಣ್ಣಿನ ಜೊತೆ ಕಪ್ಪು ಉಪ್ಪನ್ನು ಅವಶ್ಯವಾಗಿ ನೀಡಿ. ಮಕ್ಕಳು ಸೇಬು ಹಣ್ಣನ್ನು ತಿನ್ನುವುದಿಲ್ಲವೆಂದಾದ್ರೆ ಜ್ಯೂಸ್ ಮಾಡಿ ಕುಡಿಸಿ.

ಪುದೀನಾ: ಪುದೀನಾ ದೇಹವನ್ನು ತಂಪು ಮಾಡುತ್ತದೆ. ಸ್ವಲ್ಪ ಪುದೀನಾ ರಸಕ್ಕೆ ಜೇನು ತುಪ್ಪವನ್ನು ಬೆರೆಸಿ ಬೆಳಿಗ್ಗೆ ಹಾಗೂ ರಾತ್ರಿ ಈ ಮಿಶ್ರಣವನ್ನು 1 ಚಮಚ ಬಿಸಿನೀರಿನೊಂದಿಗೆ ನೀಡಿ. ಇದ್ರಿಂದ ಹೊಟ್ಟೆ ಸ್ವಚ್ಛವಾಗಿ ಹಸಿವು ಹೆಚ್ಚಾಗುತ್ತದೆ.

ಹಸಿರು ತರಕಾರಿ: ಹಸಿರು ಎಲೆ ಹಾಗೂ ತರಕಾರಿಗಳಿಂದ ಮಾಡಿದ ಸೂಪ್ ಮಕ್ಕಳಿಗೆ ನೀಡಿ. ಇದು ಮಲಬದ್ಧತೆಯನ್ನ ಕಡಿಮೆ ಮಾಡುತ್ತದೆ. ಹಾಗೆ ಹೊಟ್ಟೆಯಲ್ಲಿರುವ ಗ್ಯಾಸ್ ಹೋಗಲಾಡಿಸಿ ಹಸಿವು ಹೆಚ್ಚಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read