ಸದಾ ಆರೋಗ್ಯವಂತ ವ್ಯಕ್ತಿಯಾಗಿರಲು ಮಾಡಿ ಈ ಕೆಲಸ

ಭಗವಂತ ಶಿವನ ಸೌಮ್ಯತೆಯನ್ನು ನೋಡಿಯೇ ಸೋಮವಾರವನ್ನು ಅವನ ಪೂಜೆಗೆ ಮೀಸಲಿಟ್ಟಿದ್ದಾರೆ ಭಕ್ತರು.

ಸರಳತೆ ಹಾಗೂ ಸಹಜತೆಯಿಂದಲೇ ಶಿವನಿಗೆ ಭೋಲೆನಾಥ ಎಂದು ಕರೆಯಲಾಗುತ್ತದೆ. ಸೋಮ ಎಂದ್ರೆ ಚಂದ್ರ ಎಂದೂ ಅರ್ಥ. ಚಂದ್ರ, ಮನಸ್ಸಿನ ಪ್ರತೀಕ. ಮನಸ್ಸಿನ ಚೇತನವನ್ನು ಹೆಚ್ಚಿಸುವವನು ಶಿವ.

ಜ್ಯೋತಿಷ್ಯದ ಪ್ರಕಾರ ಹಾಲನ್ನು ಚಂದ್ರ ಗ್ರಹಕ್ಕೆ ಹೋಲಿಸಲಾಗಿದೆ. ಎಳ್ಳಿನ ಎಣ್ಣೆಗೆ ಹಾಲು ಬೆರೆಸಿ ಶಿವಲಿಂಗಕ್ಕೆ ಅರ್ಪಣೆ ಮಾಡುವುದರಿಂದ ಗ್ರಹ ದೋಷಗಳು ನಿವಾರಣೆಯಾಗುತ್ತದೆ. ಇದೇ ಪ್ರಕಾರ ಹಾವಿಗೆ ಹಾಲುಣಿಸುವುದರಿಂದ ರಾಹುವಿನ ಕೃಪೆಗೆ ಪಾತ್ರರಾಗಬಹುದು. ಪ್ರಾಚೀನ ತಾಂತ್ರಿಕ ಗ್ರಂಥಗಳಲ್ಲಿ ಕೆಲ ಸಮಸ್ಯೆಗೆ ಪರಿಹಾರ ಹೇಳಲಾಗಿದೆ.

ಸೋಮವಾರ ರಾತ್ರಿ 9 ಗಂಟೆಗೆ ಶಿವನ ದೇವಸ್ಥಾನಕ್ಕೆ ಹೋಗಿ ಹಾಲು ಮಿಶ್ರಿತ ಜಲವನ್ನು ಶಿವಲಿಂಗಕ್ಕೆ ಅರ್ಪಣೆ ಮಾಡಬೇಕು. ಇದ್ರಿಂದ ಖಾಯಿಲೆಗಳು ಕಡಿಮೆಯಾಗಿ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ.

ರುದ್ರಾಕ್ಷಿ ಧರಿಸುವುದರಿಂದ ತನು-ಮನದಲ್ಲಿ ಪವಿತ್ರತೆಯ ಸಂಚಾರವಾಗುತ್ತದೆ. ಯಾವ ವ್ಯಕ್ತಿ ಶುದ್ಧ ಹಾಗೂ ಪವಿತ್ರ ಮನದಿಂದ ಭಗವಂತ ಶಿವನ ಆರಾಧನೆ ಮಾಡಿ ರುದ್ರಾಕ್ಷಿ ಮಾಲೆ ಧರಿಸುತ್ತಾನೆಯೋ ಆತನ ಎಲ್ಲ ಕಷ್ಟಗಳು ದೂರವಾಗುತ್ತವೆ. 14 ಮುಖಿ ರುದ್ರಾಕ್ಷಿ ಧರಿಸುವುದರಿಂದ ಸರ್ವರೋಗಗಳು ವಾಸಿಯಾಗುತ್ತವೆ. ಗುಣಪಡಿಸಲಾಗದ ರೋಗ ಕೂಡ ಕಡಿಮೆಯಾಗುತ್ತದೆ. ಜನ್ಮಜನ್ಮಾಂತರಗಳ ಪಾಪ ದೂರವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read