ಮನೆಯಲ್ಲಿ ಸದಾ ಹಣ ತುಂಬಿರಬೇಕೆಂದ್ರೆ ಹೀಗೆ ಮಾಡಿ

ನಮ್ಮ ಆರ್ಥಿಕ ಪರಿಸ್ಥಿತಿ ಮೇಲೆ ವಾಸ್ತು ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರುತ್ತದೆ. ಮನೆಯ ವಾಸ್ತು ಕೆಟ್ಟದಾಗಿದ್ದರೆ ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಯಾವುದೇ ಕೆಲಸದಲ್ಲಿ ಲಾಭ ಪ್ರಾಪ್ತಿಯಾಗುವುದಿಲ್ಲ. ಹಾಗಾಗಿ ಮನೆಯ ವಾಸ್ತುವಿನ ಬಗ್ಗೆ ವಿಶೇಷ ಗಮನ ನೀಡಬೇಕು.

ಹಾಳಾದ ಹಣ್ಣುಗಳು ಕೂಡ ನಮ್ಮ ಭಾಗ್ಯದ ಮೇಲೆ ಪರಿಣಾಮ ಬೀರುತ್ತವೆ. ಹಣ್ಣುಗಳನ್ನು ಅಡುಗೆ ಮನೆಯಲ್ಲಿ ಇಡ್ತೇವೆ. ಹಣ್ಣು ಹಾಳಾಗಿದ್ದರೂ ಅದನ್ನು ಕೆಲವರು ಕಸಕ್ಕೆ ಎಸೆಯುವುದಿಲ್ಲ. ವಾಸ್ತು ಪ್ರಕಾರ,ಇದು ನಕಾರಾತ್ಮಕ ಶಕ್ತಿ ಹರಡುತ್ತದೆ. ಇದ್ರಿಂದಾಗಿ ಹಣ ಸರಿಯಾಗಿ ನಮ್ಮ ಕೈ ಸೇರುವುದಿಲ್ಲ. ಕೊಳೆತ ಮತ್ತು ಹಾಳಾದ ಹಣ್ಣನ್ನು ಮನೆಯಲ್ಲಿ ಇಡಬಾರದು.

ಮನೆಯ ಬಾಗಿಲಿಗೆ ಕೆಂಪು ದಾರವನ್ನು ಹಾಕುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದರೊಂದಿಗೆ ಧನಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸುತ್ತದೆ. ಇದರಿಂದ ಹಣದ ಸಮಸ್ಯೆ ದೂರವಾಗುತ್ತದೆ.

ವಾಸ್ತು ಪ್ರಕಾರ ಮನೆಯ ಪೂರ್ವ ಭಾಗದ ಗೋಡೆಗೆ ಹಳದಿ ಬಣ್ಣವನ್ನು ಹಚ್ಚಬೇಕು. ಧನಾತ್ಮಕ ಶಕ್ತಿಯು ಈ ದಿಕ್ಕಿನಿಂದ ಹರಿಯುತ್ತದೆ. ಇದು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ. ಹೊಸ ಆದಾಯದ ಮೂಲಗಳನ್ನು ಸೃಷ್ಟಿಸುತ್ತದೆ.

ಹಣವು ನಿಧಾನ ಗತಿಯಲ್ಲಿ ಮನೆಗೆ ಬರುತ್ತದೆ. ಅಲ್ಪಸ್ವಲ್ಪ ಹಣ ನೋಡಿದ ಜನರು ತೃಪ್ತಿ ಹೊಂದುವುದಿಲ್ಲ. ಇದು ಲಕ್ಷ್ಮಿ ಮುನಿಸಿಗೆ ಕಾರಣವಾಗುತ್ತದೆ. ಹಾಗಾಗಿ ಕಡಿಮೆ ಹಣವಿದ್ದರೂ ಅದನ್ನು ಸಂತೋಷದಿಂದ ಸ್ವಾಗತಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read