ʼಫೆಂಗ್ ಶೂಯಿʼಯ ಈ ಉಪಾಯ ಮಾಡಿ ಚಮತ್ಕಾರ ನೋಡಿ…..!

ಹಗಲು-ರಾತ್ರಿ ಎನ್ನದೆ ಕೆಲಸ ಮಾಡಿದ್ರೂ ಕೆಲವೊಮ್ಮೆ ಯಶಸ್ಸು ಮರೀಚಿಕೆಯಾಗುತ್ತದೆ. ವ್ಯಾಪಾರದಲ್ಲಿ ಲಾಭ ಸಿಗುವುದಿಲ್ಲ. ಕುಟುಂಬದ ಸದಸ್ಯರ ಮಧ್ಯೆ ಸದಾ ಗಲಾಟೆ-ಜಗಳ. ಇದಕ್ಕೆ ನಿಮ್ಮ ಸುತ್ತಮುತ್ತ ಓಡಾಡುತ್ತಿರುವ ನಕಾರಾತ್ಮಕ ಶಕ್ತಿ ಕೂಡ ಒಂದು ಕಾರಣವಾಗಿರಬಹುದು.

ಭಾರತದ ವಾಸ್ತುಶಾಸ್ತ್ರ ಹಾಗೂ ಚೀನಾದ ಫೆಂಗ್ ಶೂಯಿಯಲ್ಲಿ ಕೆಲವೊಂದು ಉಪಾಯಗಳನ್ನು ಹೇಳಲಾಗಿದೆ. ಇದ್ರ ಸಹಾಯದಿಂದ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಯಶಸ್ಸಿನ ಮುಖ ನೋಡಬಹುದಾಗಿದೆ.

ವ್ಯಾಪಾರದಲ್ಲಿ ಯಶಸ್ಸು ಸಿಗದೆ ಹೋದಲ್ಲಿ ಲಕ್ಷಗಟ್ಟಲೆ ನಷ್ಟವಾಗ್ತಿದ್ದರೆ ಫೆಂಗ್ ಶೂಯಿಯ ಮೂರು ನಾಣ್ಯವನ್ನು ಕೆಂಪು ದಾರದಲ್ಲಿ ಕಟ್ಟಿ ಮನೆ ಅಥವಾ ಕಚೇರಿ ಮುಖ್ಯ ದ್ವಾರದಲ್ಲಿ ಉತ್ತರ ದಿಕ್ಕಿಗೆ ತೂಗುಹಾಕಿ.

ಕೆಲವೊಮ್ಮೆ ಸಾಲ ನೀಡಿದ ಹಣ ಎಷ್ಟು ಪ್ರಯತ್ನಪಟ್ಟರೂ ವಾಪಸ್ ಸಿಗುವುದಿಲ್ಲ. ಇಂಥ ಸಂದರ್ಭದಲ್ಲಿ ಹಣ ವಾಪಸ್ ಪಡೆಯಲು ನಿಮ್ಮ ಬೆಡ್ ರೂಂನ ಕಿಟಕಿಗೆ ಕೆಂಪು ಬಣ್ಣದ ದಾರದಲ್ಲಿ ಕಟ್ಟಿದ ಮೂರು ನಾಣ್ಯವನ್ನು ತೂಗುಹಾಕಿ.

ಒಳ್ಳೆ ವಿದ್ಯಾಭ್ಯಾಸವಿದ್ದರೂ ನೌಕರಿ ಸುಲಭವಾಗಿ ಸಿಗೋದಿಲ್ಲ. ಕೋಣೆಯ ದಕ್ಷಿಣ ದಿಕ್ಕಿಗೆ ಮೂರು ನಾಣ್ಯಗಳನ್ನು ತೂಗಿ ಹಾಕುವುದರಿಂದ ಶೀಘ್ರದಲ್ಲಿ ನೌಕರಿ ಸಿಗಲಿದೆ.

ಮನೆಯಲ್ಲಿ ಸಣ್ಣ ಸಣ್ಣ ವಿಚಾರಕ್ಕೆ ಗಲಾಟೆಯಾಗುತ್ತಿದ್ದರೆ ಮನೆಯ ಮುಖ್ಯ ಕೋಣೆಯಲ್ಲಿ ಫೆಂಗ್ ಶೂಯಿ ನಾಣ್ಯವನ್ನು ತೂಗುಹಾಕಿ. ಇಷ್ಟಾದ್ರೂ  ದೌರ್ಭಾಗ್ಯ ನಿಮ್ಮ ಬೆನ್ನು ಬಿಡದೆ ಹೋದಲ್ಲಿ ಮನೆಯ ಮುಖ್ಯ ದ್ವಾರದ ಮುಂದೆ ನಾಣ್ಯಗಳನ್ನು ತೂಗುಹಾಕಿ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read