ಈಗ ಜೀವನ ಶೈಲಿ ಬದಲಾಗಿದೆ. ಜನರು ಬೆಳಿಗ್ಗೆ ಏಳ್ತಾ ಇದ್ದಂತೆ ಹಾಸಿಗೆ ಮೇಲೆಯೇ ಕುಳಿತು ಕಾಫಿ ಹೀರ್ತಾರೆ. ಶಾಸ್ತ್ರಗಳ ಪ್ರಕಾರ ಇದು ಒಳ್ಳೆಯದಲ್ಲ. ಬೆಳಿಗ್ಗೆ ಎದ್ದ ತಕ್ಷಣ ಮುಖ, ಕೈ ತೊಳೆಯದೆ ಏನನ್ನೂ ತಿನ್ನಬಾರದು, ಕುಡಿಯಬಾರದು. ಇದು ನಮ್ಮ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಗ್ರಹಗಳಲ್ಲಿ ಏರುಪೇರಾಗುತ್ತದೆ.
ಬೆಳಿಗ್ಗೆ ಎದ್ದ ತಕ್ಷಣ ಕೈ, ಕಾಲು, ಮುಖ ತೊಳೆದು ಒಂದು ಗ್ಲಾಸ್ ನೀರು ಕುಡಿಯಿರಿ. ನಂತ್ರ ಟೀ ಅಥವಾ ಕಾಫಿ ಕುಡಿಯಿರಿ. ಬೆಳಿಗ್ಗೆ ಎದ್ದು ಯಾರ ಮುಖ ನೋಡಿದ್ನೋ ಅಂತಾ ಅನೇಕರು ಗೊಣಗ್ತಾರೆ. ಬೆಳಿಗ್ಗೆ ಎದ್ದ ತಕ್ಷಣ ಮೊದಲು ಏನು ನೋಡ್ತೇವೋ ಅದು ಶುಭ ಅಥವಾ ಅಶುಭಕ್ಕೆ ಕಾರಣ ಎಂದು ನಾವು ನಂಬಿದ್ದೇವೆ. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಒಳ್ಳೆಯದನ್ನು ನೋಡ ಬಯಸ್ತೇವೆ.