ಹಾವು ಕಚ್ಚಿದರೆ ಗಾಬರಿಯಾಗಬೇಡಿ; ಜೀವ ಉಳಿಸಲು ಈ ರೀತಿ ಮಾಡಿ…!

ಶತಮಾನಗಳಿಂದಲೂ ಹಾವುಗಳು ಮತ್ತು ಮನುಷ್ಯರ ನಡುವಿನ ಸಂಬಂಧ ಅಷ್ಟು ಉತ್ತಮವಾಗಿಲ್ಲ. ಎರಡೂ ಜೀವಿಗಳು ಒಬ್ಬರನ್ನೊಬ್ಬರು ನೋಡಿ ಭಯಪಡುತ್ತವೆ. ಮುಖಾಮುಖಿಯಾದಾಗ ಜೀವವನ್ನು ಉಳಿಸಿಕೊಳ್ಳಲು ಎಲ್ಲ ರೀತಿಯಲ್ಲಿ ಪ್ರಯತ್ನಿಸುತ್ತಾರೆ. ಭಾರತದಲ್ಲಿ ಹಾವು ಕಡಿತದಿಂದ ಅನೇಕ ಜನರು ಸಾಯುತ್ತಾರೆ. ಹಾಗಾಗಿ ಹಾವುಗಳ ಬಗ್ಗೆ ಜಾಗರೂಕರಾಗಿರಬೇಕು. ಹಾವು ಕಡಿದಾಗ ಜೀವ ಉಳಿಸಲು ಏನು ಮಾಡಬೇಕು ಎಂಬುದನ್ನು ತಿಳಿದಿರಬೇಕು.

ಹಾವು ಕಚ್ಚಿದಾಗ ಏನು ಮಾಡಬೇಕು ?

ಅಂಕಿಅಂಶಗಳ ಪ್ರಕಾರ ಪ್ರಪಂಚದಲ್ಲಿ 3 ಸಾವಿರಕ್ಕೂ ಹೆಚ್ಚು ಜಾತಿಯ ಹಾವುಗಳಿವೆ. ಇದರಲ್ಲಿ ಕೇವಲ 10 ರಿಂದ 15 ಪ್ರತಿಶತದಷ್ಟು ಹಾವುಗಳು ವಿಷಪೂರಿತವಾಗಿವೆ. ಅವು ಮನುಷ್ಯರನ್ನು ಕೊಲ್ಲುವ ಶಕ್ತಿಯನ್ನು ಹೊಂದಿವೆ. ಅನೇಕ ಬಾರಿ ವಿಷರಹಿತ ಹಾವುಗಳ ಕಡಿತದಿಂದ ಜನರು ಪ್ರಾಣ ಕಳೆದುಕೊಳ್ಳುತ್ತಾರೆ, ಭಯದಿಂದಲೇ ಸತ್ತು ಹೋಗುತ್ತಾರೆ. ಹಾಗಾಗಿ ಹಾವು ಕಡಿದಾಗ ಭಯಪಡಬಾರದು.

ಹಾವು ಕಚ್ಚಿದಾಗ ಏನಾಗುತ್ತದೆ ?

ಹಾವು ಕಚ್ಚಿದಾಗ ವಾಂತಿ, ವಾಕರಿಕೆ, ಹೊಟ್ಟೆ ನೋವು, ತಲೆಸುತ್ತು, ತಲೆನೋವು, ಕಡಿಮೆ ರಕ್ತದೊತ್ತಡ, ತೀವ್ರವಾದ ಬಾಯಾರಿಕೆ ಮತ್ತು ಜ್ವರ ಮುಂತಾದ ಅನೇಕ ರೀತಿಯ ಬದಲಾವಣೆಗಳು ಬರಲು ಪ್ರಾರಂಭಿಸುತ್ತವೆ. ಅನೇಕ ಹಾವುಗಳ ವಿಷವು ತುಂಬಾ ವೇಗವಾಗಿ ಕೆಲಸ ಮಾಡುತ್ತದೆ. ಆದರೆ ಕೆಲವು ಹಾವುಗಳ ವಿಷವು 3 ರಿಂದ 4 ಗಂಟೆಗಳಲ್ಲಿ ತನ್ನ ಪರಿಣಾಮವನ್ನು ತೋರಿಸಲು ಪ್ರಾರಂಭಿಸುತ್ತದೆ. ಈ ಸಮಯದಲ್ಲಿ ಸರಿಯಾದ ಕ್ರಮಗಳನ್ನು ತೆಗೆದುಕೊಂಡರೆ ಜೀವವನ್ನು ಉಳಿಸಬಹುದು.

ತೊಗರಿ ಬೇಳೆ – ಹಾವು ಕಚ್ಚಿದಾಗ ತೊಗರಿಬೇಳೆಯನ್ನು ತಿನ್ನಬೇಕು. ಅಕಸ್ಮಾತ್‌ ತೊಗರಿ ಗಿಡವಿದ್ದರೆ ಹಾವು ಕಚ್ಚಿದವರಿಗೆ ಆ ಗಿಡದ ಬೇರನ್ನು ಅರೆದು ತಿನ್ನಿಸಿದರೆ ಬೇಗ ವಿಷದ ಪರಿಣಾಮ ಕಡಿಮೆಯಾಗುತ್ತದೆ.

ಬೆಳ್ಳುಳ್ಳಿ – ಬೆಳ್ಳುಳ್ಳಿ ಕೂಡ ಹಾವಿನ ವಿಷದ ಪರಿಣಾಮವನ್ನು ಕಡಿಮೆ ಮಾಡಬಲ್ಲದು. ಹಾವಿನ ಕಡಿತಕ್ಕೊಳಗಾದರೆ ಬೆಳ್ಳುಳ್ಳಿಯನ್ನು ರುಬ್ಬಿಕೊಂಡು ಪೇಸ್ಟ್ ಮಾಡಿ ನಂತರ ಅದಕ್ಕೆ ಜೇನುತುಪ್ಪ ಬೆರೆಸಿ ತಿನ್ನಿ.

ಇಷ್ಟೆಲ್ಲಾ ಮನೆಮದ್ದುಗಳಿದ್ದರೂ ಹಾವು ಕಡಿತಕ್ಕೆ ನಿಜವಾದ ಚಿಕಿತ್ಸೆಯು ವೈದ್ಯರಿಂದ ಮಾತ್ರ ಸಾಧ್ಯ. ಮೊದಲು ಅವರನ್ನು ವೈದ್ಯರ ಬಳಿ ಕರೆದೊಯ್ಯಿರಿ. ಯಾವ ಹಾವು ಕಡಿದಿದೆ ಎಂಬುದನ್ನು ಪತ್ತೆ ಮಾಡಲು ಆ ಹಾವಿನ ಫೋಟೋವನ್ನು ತೆಗೆದಿಟ್ಟುಕೊಳ್ಳಿ ಅಥವಾ ಹಾವಿನ ವಿವರ ನೀಡಲು ಪ್ರಯತ್ನಿಸಿ. ಇದರಿಂದ ವೈದ್ಯರಿಗೆ ಸರಿಯಾದ ಔಷಧ ನೀಡಲು ಸುಲಭವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read