ಮಕ್ಕಳಿಗೆ ಹೊಟ್ಟೆನೋವು ಕಾಣಿಸಿಕೊಂಡರೆ ನಿರ್ಲಕ್ಷ ಬೇಡ, ಬೇಸಿಗೆಯಲ್ಲಿ ಕಾಡಬಹುದು ಸ್ಟಮಕ್‌ ಫ್ಲೂ…!

ದೇಶಾದ್ಯಂತ ಬಿಸಿಲು ಮತ್ತು ಸೆಖೆ ಹೆಚ್ಚುತ್ತಲೇ ಇದೆ. ತಾಪಮಾನ ಏರಿಕೆಯಿಂದಾಗಿ ಅನೇಕ ರೋಗಗಳು ಕೂಡ ಹರಡುತ್ತಿವೆ. ಮಕ್ಕಳಲ್ಲಿ ವಾಂತಿ, ಭೇದಿ, ಹೊಟ್ಟೆ ನೋವಿನ ಸಮಸ್ಯೆಗಳು ಕಾಣಿಸಿಕೊಳ್ತಿವೆ. ಹೊಟ್ಟೆ ನೋವಿನಿಂದ ಅನೇಕರು ಆಸ್ಪತ್ರೆ ಸೇರಿದ್ದಾರೆ.

ಬೇಸಿಗೆಯಲ್ಲಿ ಸ್ವಲ್ಪ ಅಜಾಗರೂಕತೆ ತೋರಿದರೂ ಮಕ್ಕಳ ಆರೋಗ್ಯ  ಹದಗೆಡುವ ಸಾಧ್ಯತೆ ಇರುತ್ತದೆ. ಅತಿಯಾದ ಸೆಖೆಯಿಂದಾಗಿ ವೈರಲ್ ಗ್ಯಾಸ್ಟ್ರೋಎಂಟರೈಟಿಸ್ ಸಮಸ್ಯೆ ಪ್ರಾರಂಭವಾಗುತ್ತದೆ. ಈ ಕಾಯಿಲೆಯು ಸೋಂಕಿತ ವ್ಯಕ್ತಿ ಅಥವಾ ಕಲುಷಿತ ಆಹಾರ, ನೀರಿನಿಂದ ಸಂಭವಿಸುತ್ತದೆ. ಇದಕ್ಕೆ ಯಾವುದೇ ಪರಿಣಾಮಕಾರಿ ಚಿಕಿತ್ಸೆ ಇಲ್ಲ, ಆದರೆ ಅದನ್ನು ತಡೆಗಟ್ಟಬಹುದು.

ಬೇಸಿಗೆಯಲ್ಲಿ ಹೆಚ್ಚಿನ ತಾಪಮಾನದಿಂದಾಗಿ ಆಹಾರ ಬೇಗನೆ ಕೆಡುತ್ತದೆ. ಹಳಸಿದ ಆಹಾರ ಸೇವಿಸಿದಲ್ಲಿ ನೊರೊವೈರಸ್ ಮತ್ತು ಆಸ್ಟ್ರೋವೈರಸ್ ಎಂಬ ಬ್ಯಾಕ್ಟೀರಿಯಾಗಳು ನಮ್ಮ ದೇಹ ಸೇರುತ್ತವೆ.  ಮಕ್ಕಳು ಈ ಕಲುಷಿತ ಆಹಾರವನ್ನು ಸೇವಿಸಿದಾಗ ಅವರ ಹೊಟ್ಟೆಯಲ್ಲಿ ಸೋಂಕು ಹರಡುತ್ತದೆ, ಇದನ್ನು ಹೊಟ್ಟೆ ಜ್ವರ ಎಂದೂ ಕರೆಯುತ್ತಾರೆ.

ಸಾಮಾನ್ಯವಾಗಿ ಈ ಸಮಸ್ಯೆ ಬೇಸಿಗೆ ಅಥವಾ ಮಳೆಗಾಲದಲ್ಲಿ ಹೆಚ್ಚು. ಏಕೆಂದರೆ ಈ ಋತುಗಳಲ್ಲಿ ಇರುವ ಶಾಖ, ಆರ್ದ್ರತೆ ಮತ್ತು ತೇವಾಂಶವು ಬ್ಯಾಕ್ಟೀರಿಯಾಗಳು ಬೆಳೆಯಲು ಅನುಕೂಲಕರ ವಾತಾವರಣವನ್ನು ಒದಗಿಸುತ್ತದೆ. ಈ ಋತುವಿನಲ್ಲಿ ಹಣ್ಣು,  ತರಕಾರಿಗಳು ಮತ್ತು ಬೇಯಿಸಿದ ಆಹಾರ ಕೂಡ ಬೇಗನೆ ಹಾಳಾಗುತ್ತದೆ.

ಸ್ಟಮಕ್‌ ಫ್ಲೂಗೆ ಕಾರಣ…

ಮಕ್ಕಳು ಹಳಸಿದ ಅಥವಾ ಕಲುಷಿತ ಆಹಾರವನ್ನು ಸೇವಿಸಿದಾಗ, ಬ್ಯಾಕ್ಟೀರಿಯಾಗಳು ಅವರ ಕರುಳನ್ನು ಪ್ರವೇಶಿಸುತ್ತವೆ. ಇದರಿಂದಾಗಿ ಅತಿಸಾರ, ವಾಕರಿಕೆ, ವಾಂತಿ, ಜ್ವರ ಮತ್ತು ಹೊಟ್ಟೆ ನೋವು ಬರುತ್ತದೆ. ಇದು ಡಿಹೈಡ್ರೇಶನ್‌ಗೆ ಕಾರಣವಾಗಬಹುದು. ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ಸ್ಟಮಕ್‌ ಫ್ಲೂ ಕೂಡ ಬರುತ್ತದೆ. ಇದು ತೀರಾ ಗಂಭೀರವಾದ ಕಾಯಿಲೆಯಲ್ಲ, ಆದರೆ ಸಕಾಲದಲ್ಲಿ ಚಿಕಿತ್ಸೆ ಪಡೆಯುವುದು ಅಗತ್ಯ.

ಸ್ಟಮಕ್‌ ಫ್ಲೂ ಲಕ್ಷಣ…

ಹೊಟ್ಟೆ ನೋವು

ಹಸಿವಿನ ನಷ್ಟ

ವಿಪರೀತ ಬೆವರುವುದು

ವಾಂತಿ ಮತ್ತು ಭೇದಿ ಸಮಸ್ಯೆ

ಜ್ವರ

ಸ್ನಾಯು ನೋವು

ಸ್ಟಮಕ್‌ ಫ್ಲೂಗೆ ಪರಿಹಾರ…

ಸದಾ ತಾಜಾ ಆಹಾರವನ್ನು ಸೇವಿಸಬೇಕು. ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗದಂತೆ ಸಾಕಷ್ಟು ನೀರು ಕುಡಿಯಬೇಕು. ಸ್ಟ್ರೀಟ್‌ ಫುಡ್‌ ಸೇವಿಸಬಾರದು. ಹೊಟ್ಟೆ ನೋವು ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read