ವ್ಯಾಯಾಮದ ನಂತರ ಅಪ್ಪಿ-ತಪ್ಪಿಯೂ ಸೇವಿಸಬೇಡಿ ಈ ಆಹಾರ; ವ್ಯರ್ಥವಾಗಬಹುದು ಶ್ರಮ

ನಮ್ಮ ಒಟ್ಟಾರೆ ಆರೋಗ್ಯ ನಾವು ಸೇವಿಸುವ ಆಹಾರ ಮತ್ತು ವ್ಯಾಯಾಮವನ್ನು ಅವಲಂಬಿಸಿರುತ್ತದೆ. ಪ್ರತಿದಿನ ಬೆಳಗ್ಗೆ ಅನೇಕರು ವಾಕ್ ಮಾಡುತ್ತಾರೆ, ಜಿಮ್‌ನಲ್ಲಿ ಬೆವರು ಹರಿಸುತ್ತಾರೆ. ನಂತರ  ಉಪಾಹಾರ ಸೇವಿಸುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ವ್ಯಾಯಾಮದ ನಂತರ ಏನನ್ನು ಸೇವಿಸಬೇಕು ಎಂಬುದು ಬಹಳ ಮುಖ್ಯ.

ವ್ಯಾಯಾಮದ ನಂತರ ಏನು ತಿನ್ನಬಾರದು?

ರಿದ ಆಹಾರ

ಕರಿದ ಆಹಾರಗಳಲ್ಲಿ ಅನಾರೋಗ್ಯಕರ ಕೊಬ್ಬಿನಂಶ ಹೆಚ್ಚಿರುತ್ತದೆ. ಇದು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ.  ಆದ್ದರಿಂದ ವ್ಯಾಯಾಮದ ನಂತರ ಕರಿದ ಆಹಾರವನ್ನು ಸೇವಿಸಬಾರದು. ಅವುಗಳ ಬದಲು ಸಸ್ಯ ಆಧಾರಿತ ಆರೋಗ್ಯಕರ ಪ್ರೋಟೀನ್ ಅನ್ನು ತೆಗೆದುಕೊಳ್ಳಬಹುದು.

ಮಸಾಲೆಯುಕ್ತ ಪದಾರ್ಥ

ಹೆಚ್ಚು ಮಸಾಲೆಯುಕ್ತ ಆಹಾರವು ನಾಲಿಗೆಗೆ ರುಚಿ ಕೊಡುತ್ತದೆ. ಆದರೆ ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದಲ್ಲ. ವ್ಯಾಯಾಮದ ನಂತರ ಮಸಾಲೆಯುಕ್ತ ಪದಾರ್ಥಗಳನ್ನು ಸೇವಿಸಿದರೆ ಅದು ಜೀರ್ಣಕ್ರಿಯೆಗೆ  ಸಮಸ್ಯೆಗಳನ್ನು ಉಂಟುಮಾಡಬಹುದು. ಎದೆಯುರಿ ಕೂಡ ಬರಬಹುದು. ಮಸಾಲೆಗಳನ್ನು ಹೆಚ್ಚು ಬೇಯಿಸಿದರೆ, ಅವುಗಳ ಪೋಷಕಾಂಶಗಳು ಸಹ ಕಳೆದುಹೋಗುತ್ತವೆ.

ಸಿಹಿ ಆಹಾರ

ಸಿಹಿ ಪದಾರ್ಥಗಳು ನಮ್ಮನ್ನು ಹೆಚ್ಚು ಆಕರ್ಷಿಸುತ್ತವೆ. ವಿಶೇಷವಾಗಿ  ಸಿಹಿತಿಂಡಿಗಳು, ತಂಪು ಪಾನೀಯ, ಐಸ್ ಕ್ರೀಮ್ ಮತ್ತು ಫುಡ್ಡಿಂಗ್‌ ತಿನ್ನಲು ಇಷ್ಟಪಡುತ್ತೇವೆ. ಆದರೆ ವ್ಯಾಯಾಮದ ನಂತರ ನಾವು ಅವುಗಳನ್ನು ಸೇವಿಸಿದರೆ ನಮ್ಮ ಎಲ್ಲಾ ಶ್ರಮವು ವ್ಯರ್ಥವಾಗಬಹುದು. ವ್ಯಾಯಾಮದ ಮೂಲಕ ಕಡಿಮೆ ಮಾಡಿದ ಕ್ಯಾಲೋರಿಗಳು ಮತ್ತೆ ದೇಹ ಸೇರಿಕೊಳ್ಳಬಹುದು.

ಮದ್ಯ

ಆಲ್ಕೋಹಾಲ್ ಆರೋಗ್ಯದ ಶತ್ರು. ಆದರೆ ವ್ಯಾಯಾಮದ ನಂತರ  ಅದನ್ನು ಸೇವಿಸಿದರೆ ಡಿಹೈಡ್ರೇಶನ್‌ ಆಗಬಹುದು. ಇದು ಹೃದಯಕ್ಕೂ ಹಾನಿಕಾರಕ. ಹಾಗಾಗಿ ವ್ಯಾಯಾಮದ ನಂತರ ನೀರು, ಹರ್ಬಲ್‌  ಚಹಾ ಮತ್ತು ಎಲೆಕ್ಟ್ರೋಲೈಟ್ ಭರಿತ ಪಾನೀಯಗಳನ್ನು ತೆಗೆದುಕೊಳ್ಳುವುದು ಉತ್ತಮ.

ಹಸಿ ತರಕಾರಿಗಳು

ಹಸಿ ತರಕಾರಿಗಳು ಹೇರಳವಾದ ನಾರಿನಂಶವನ್ನು ಹೊಂದಿದ್ದು, ವ್ಯಾಯಾಮದ ನಂತರ ಇದನ್ನು ಸೇವಿಸಿದರೆ ವಾಯು ಉಂಟಾಗುತ್ತದೆ. ಬೇಯಿಸಿದ ತರಕಾರಿಗಳು ಜೀರ್ಣಿಸಿಕೊಳ್ಳಲು ಸುಲಭ. ಆವಿಯಲ್ಲಿ ಬೇಯಿಸಿದ ತರಕಾರಿಗಳನ್ನು ಸಹ ತಿನ್ನಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read