ಬಿರು ಬಿಸಿಲಿನಿಂದ ಹಿಂತಿರುಗಿದ ನಂತರ 30 ನಿಮಿಷಗಳ ಕಾಲ ಮಾಡಬೇಡಿ ಈ ಕೆಲಸ…..!

ದೇಶಾದ್ಯಂತ ತಾಪಮಾನ ಏರಿಕೆಯಾಗುತ್ತಿದೆ. ಅನೇಕ ಕಡೆ ಬಿಸಿಗಾಳಿಯಿಂದ ಜನರು ತತ್ತರಿಸಿದ್ದಾರೆ. ವಿಪರೀತ ಬಿಸಿಲು ಮತ್ತು ಸೆಖೆ ಸಹಿಸಲಸಾಧ್ಯವಾಗಿದೆ. ಹಲವು ರಾಜ್ಯಗಳಲ್ಲಿ ಹೀಟ್ ವೇವ್ ಅಲರ್ಟ್ ಕೂಡ ನೀಡಲಾಗಿದೆ.

ಬೇಸಿಗೆಯಲ್ಲಿ ಡಿಹೈಡ್ರೇಶನ್‌ ಮತ್ತು ಹೀಟ್‌ ವೇವ್‌ ಅಪಾಯ ಹೆಚ್ಚು. ಆದ್ದರಿಂದ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ಬೇಸಿಗೆ ಕಾಲದಲ್ಲಿ ಬಿಸಿಲಿನಿಂದ ಮಾತ್ರ ಆರೋಗ್ಯ ಕೆಡುವುದಿಲ್ಲ. ಅನೇಕ ಬಾರಿ ನಾವು ತಿಳಿಯದೆ ಕೆಲವು ತಪ್ಪುಗಳನ್ನು ಮಾಡುವುದರಿಂದ ಅನಾರೋಗ್ಯ ಉಂಟಾಗುತ್ತದೆ. ಬಿರು ಬಿಸಿಲಿನಿಂದ ಬಂದ ತಕ್ಷಣ ನಾವು ಮಾಡುವ ಕೆಲವೊಂದು ಕೆಲಸಗಳೇ ನಮ್ಮನ್ನು ಅನಾರೋಗ್ಯಕ್ಕೀಡುಮಾಡುತ್ತವೆ.

ತಣ್ಣನೆಯ ವಸ್ತುಗಳ ತಕ್ಷಣದ ಬಳಕೆ: ಬೇಸಿಗೆಯಲ್ಲಿ ತಣ್ಣೀರು, ಫ್ರಿಡ್ಜ್‌ನಲ್ಲಿಟ್ಟಿರುವ ಪಾನೀಯಗಳು, ಐಸ್ ಕ್ರೀಂನಂತಹ ವಸ್ತುಗಳನ್ನು ತಿನ್ನಬೇಕೆನಿಸುತ್ತದೆ. ಆದರೆ ಬಿಸಿಲಿನಿಂದ ಬಂದ ತಕ್ಷಣ ಇವುಗಳನ್ನೆಲ್ಲ ತಿನ್ನಬೇಡಿ. ವಿಪರೀತ ಶಾಖದಿಂದಾಗಿ ದೇಹದ ಉಷ್ಣತೆಯು ಹೆಚ್ಚಾಗಿರುತ್ತದೆ, ಆಗ ತಣ್ಣಗಿನ ಪದಾರ್ಥ ಸೇವಿಸಿದರೆ ಆರೋಗ್ಯ  ಹದಗೆಡುತ್ತದೆ.

ತಕ್ಷಣ ಸ್ನಾನ ಮಾಡುವುದು: ಬೇಸಿಗೆಯಲ್ಲಿ ತಣ್ಣೀರಿನ ಸ್ನಾನ ತುಂಬಾ ಖುಷಿ ಕೊಡುತ್ತದೆ. ದೇಹವು ತಾಜಾತನವನ್ನೂ ಅನುಭವಿಸುತ್ತದೆ. ಆದರೆ ಬಿಸಿಲಿನಿಂದ ಹೊರಬಂದ ತಕ್ಷಣ ಸ್ನಾನ ಮಾಡುವುದು ಅಪಾಯಕಾರಿ. ದೇಹದ ಉಷ್ಣತೆ ಸಾಮಾನ್ಯ ಸ್ಥಿತಿಗೆ ಬಂದ ನಂತರವೇ ಸ್ನಾನ ಮಾಡಬೇಕು.

ಎಸಿ ಅಥವಾ ಕೂಲರ್ ಬಳಕೆ : ಬಿಸಿಲಿನಿಂದ ಹಿಂತಿರುಗಿದ ತಕ್ಷಣ ಎಸಿ ಅಥವಾ ಕೂಲರ್‌ನ ತಂಪಾದ ಗಾಳಿಯಲ್ಲಿ ಕುಳಿತುಕೊಳ್ಳುವುದು ರಿಲ್ಯಾಕ್ಸಿಂಗ್‌ ಎನಿಸಬಹುದು. ಆದರೆ ಈ ತಪ್ಪು ಮಾಡಬೇಡಿ. ತಾಪಮಾನದಲ್ಲಿನ ಹಠಾತ್ ಬದಲಾವಣೆಯು ಶೀತ, ಕೆಮ್ಮು ಮತ್ತು ಅಲರ್ಜಿಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಅವುಗಳ ಬದಲು ಸ್ವಲ್ಪ ಹೊತ್ತು ಫ್ಯಾನ್‌ ಗಾಳಿಗೆ ಒಡ್ಡಿಕೊಳ್ಳಿ.

ಭಾರೀ ಭೋಜನ ಮಾಡುವುದು: ಬೇಸಿಗೆಯಲ್ಲಿ ಕರಿದ ಆಹಾರವನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಸುಡು ಬಿಸಿಲಿನಿಂದ ಹಿಂದಿರುಗಿದ ಬಳಕವಂತೂ ಭಾರೀ ಭೋಜನ ಮಾಡಬಾರದು. ಹಣ್ಣು, ತರಕಾರಿ ಮತ್ತು ಮೊಸರನ್ನು ಒಳಗೊಂಡಿರುವ ಲಘು ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಿ. ಇದರಿಂದ ಹೊಟ್ಟೆ ತುಂಬಿದಂತಾಗುತ್ತದೆ ಮತ್ತು ಜೀರ್ಣಕ್ರಿಯೆಯೂ ಚೆನ್ನಾಗಿರುತ್ತದೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read