ಈ ವಸ್ತುಗಳನ್ನು ಅಪ್ಪಿತಪ್ಪಿಯೂ ಬೇಯಿಸಿ ತಿನ್ನಬೇಡಿ, ಆರೋಗ್ಯಕ್ಕೆ ಹಾನಿ ಖಚಿತ….!

ಆರೋಗ್ಯವಾಗಿರಲು ಅದಕ್ಕೆ ಅಗತ್ಯವಾದ ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಕೆಲವೊಂದು ಪದಾರ್ಥಗಳು ಹೆಲ್ದಿಯಾಗಿದ್ದರೂ ಅವುಗಳನ್ನು ಸೇವಿಸುವ ವಿಧಾನ ತಪ್ಪಾಗಿದ್ದರೆ ಅವು ನಮಗೆ ಹಾನಿಯನ್ನುಂಟು ಮಾಡುತ್ತವೆ. ಅನೇಕ ಪದಾರ್ಥಗಳನ್ನು ಬೇಯಿಸಿ ತಿನ್ನುವುದರಿಂದ ಆರೋಗ್ಯಕ್ಕೆ ಸಮಸ್ಯೆಗಳಾಗುತ್ತವೆ. ಅವುಗಳು ಯಾವುವು ಅನ್ನೋದನ್ನು ನೋಡೋಣ.

ರೆಡ್‌ ಕ್ಯಾಪ್ಸಿಕಂ – ರೆಡ್‌ ಕ್ಯಾಪ್ಸಿಕಂ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಅದನ್ನು ಬೇಯಿಸಿ ತಿನ್ನಬಾರದು. ಬೇಯಿಸಿ ತಿಂದರೆ ಅದರ ಪೌಷ್ಟಿಕಾಂಶಗಳು ಸಾಯುತ್ತವೆ ಮತ್ತು ದೇಹಕ್ಕೆ ಯಾವುದೇ ಪ್ರಯೋಜನವಾಗುವುದಿಲ್ಲ.

ಡ್ರೈ ಫ್ರೂಟ್ಸ್‌ – ಡ್ರೈ ಫ್ರೂಟ್‌ಗಳನ್ನು ಬೇಯಿಸುವುದರಿಂದ ಅವುಗಳಲ್ಲಿರುವ  ಪೌಷ್ಟಿಕಾಂಶಗಳು ನಾಶವಾಗುತ್ತವೆ. ಬೇಯಿಸಿದ ಡ್ರೈಫ್ರೂಟ್‌ಗಳನ್ನು ಸೇವಿಸುವುದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಬ್ರೊಕೊಲಿ – ಬ್ರೊಕೊಲಿ ಬಹಳಷ್ಟು ಪೌಷ್ಟಿಕಾಂಶಗಳನ್ನು ಹೊಂದಿರುವ ತರಕಾರಿ. ಬೇಯಿಸಿದರೆ ಅದರಲ್ಲಿರುವ ಪೌಷ್ಟಿಕಾಂಶಗಳು ನಾಶವಾಗುತ್ತವೆ. ಆದ್ದರಿಂದ ಬ್ರೊಕೊಲಿಯನ್ನು ಸ್ಟೀಮ್‌ ಮಾಡಿ ಸೇವಿಸಬಹುದು.

ಆಲಿವ್ ಎಣ್ಣೆ- ಆಲಿವ್ ಎಣ್ಣೆಯನ್ನು ಎಂದಿಗೂ ಕುದಿಸಬಾರದು. ಬಿಸಿ ಮಾಡಿದರೆ ಪೌಷ್ಟಿಕಾಂಶಗಳು ನಾಶವಾಗುತ್ತವೆ ಮತ್ತು ಅದರಿಂದ ಪ್ರಯೋಜನದ ಬದಲು ಹಾನಿಯೂ ಉಂಟಾಗುತ್ತದೆ.

ಸೌತೆಕಾಯಿ – ಸೌತೆಕಾಯಿಯನ್ನು ಯಾವಾಗಲೂ ಹಸಿಯಾಗಿಯೇ ಸೇವಿಸಬೇಕು. ಏಕೆಂದರೆ ಬೇಯಿಸಿದ ಸೌತೆಕಾಯಿಯನ್ನು ತಿನ್ನುವುದು ಹಾನಿಯನ್ನುಂಟುಮಾಡುತ್ತದೆ. ಆದ್ದರಿಂದ ಸೌತೆಕಾಯಿಯನ್ನು ಕಚ್ಚಾ ಸೇವಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read