ಅತಿಯಾದ ವಿಟಮಿನ್ ಸಿ ಸೇವನೆ ಬೇಡ

ಅನೇಕರಿಗೆ ವಿಟಮಿನ್ ಸಿ ಬಗ್ಗೆ ತಿಳಿದಿಲ್ಲ. ಕೊರೊನಾ ಸಂದರ್ಭದಲ್ಲಿ ವಿಟಮಿನ್ ಸಿ ಸೇವನೆ ಮಹತ್ವವನ್ನು ಜನರು ಅರಿಯುತ್ತಿದ್ದಾರೆ. ವಿಟಮಿನ್ ಸಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಕ್ಯಾನ್ಸರ್ ಮತ್ತು ಇತರ ಅನೇಕ ಗಂಭೀರ ರೋಗಗಳ ಅಪಾಯವನ್ನು ಕಡಿಮೆ ಮಾಡುವ ಶಕ್ತಿ ಇದಕ್ಕಿದೆ. ಕಣ್ಣಿನ ಸಮಸ್ಯೆಯನ್ನು ಇದು ದೂರ ಮಾಡುತ್ತದೆ.

ಅಧ್ಯಯನಗಳ ಪ್ರಕಾರ, ವಿಟಮಿನ್ ಸಿ, ಕರುಳಿನ ಆರೋಗ್ಯಕ್ಕೂ ಒಳ್ಳೆಯದು. ಕರುಳಿನಲ್ಲಿರುವ  ಒಳ್ಳೆಯ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳ ನಡುವಿನ ಸಮತೋಲನವನ್ನು ನಿರ್ವಹಿಸುತ್ತದೆ. ದೇಹದಲ್ಲಿ ವಿಟಮಿನ್ ಸಿ ಉತ್ಪತ್ತಿಯಾಗುವುದಿಲ್ಲ. ಆದ್ದರಿಂದ ಆಹಾರದ ಮೂಲಕ ವಿಟಮಿನ್ ಸಿ ಸೇವನೆ ಮಾಡಬೇಕು. ವಿಟಮಿನ್ ಸಿ ಸಮೃದ್ಧವಾಗಿರುವ ಕಿತ್ತಳೆ, ಕಿವಿ, ಸ್ಟ್ರಾಬೆರಿ ಹಣ್ಣುಗಳ ಸೇವನೆ ಮಾಡಬೇಕು.

ವಯಸ್ಕ ಮಹಿಳೆಯರಿಗೆ ಪ್ರತಿದಿನ 75 ಮಿಲಿಗ್ರಾಂ ವಿಟಮಿನ್ ಸಿ ತೆಗೆದುಕೊಳ್ಳಲು ಸೂಚಿಸಲಾಗುತ್ತದೆ. ಪುರುಷರು ಪ್ರತಿ ದಿನ 90 ಮಿಲಿಗ್ರಾಂ ವಿಟಮಿನ್ ಸಿ ಸೇವನೆ ಮಾಡಬೇಕು. ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು ಪ್ರತಿ ದಿನ 85 ರಿಂದ 120 ಮಿಗ್ರಾಂ ವರೆಗೆ ಸೇವನೆ ಮಾಡಬೇಕು. ವಿಟಮಿನ್ ಸಿ ಯ ಗರಿಷ್ಠ ಮಿತಿಯು ಪ್ರತಿದಿನ 2,000 ಮಿಗ್ರಾಂ.

ವಿಟಮಿನ್ ಸಿ ಅತಿಯಾಗಿ ಸೇವಿಸುವುದರಿಂದ ದೇಹಕ್ಕೆ ಹಾನಿಯಾಗುತ್ತದೆ. ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ಅತಿಸಾರ, ಸೆಳೆತ ಮತ್ತು ವಾಕರಿಕೆಗೆ ಕಾರಣವಾಗಬಹುದು. ಹಾಗಾಗಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂಬ ಕಾರಣಕ್ಕೆ ಮಿತಿಮೀರಿ ವಿಟಮಿನ್ ಸಿ ಸೇವನೆ ಮಾಡಬೇಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read