ನಿಯಮದ ಪ್ರಕಾರ ಮಾಡಿ ʼನಾಗರ ಪಂಚಮಿʼಯಂದು ನಾಗರ ಪೂಜೆ

ಆಗಸ್ಟ್‌ 21  ರಂದು ನಾಗರ ಪಂಚಮಿ ಆಚರಿಸಲಾಗ್ತಿದೆ. ಶ್ರಾವಣ ಮಾಸದ  ಸೋಮವಾರ ನಾಗರ ಪಂಚಮಿ ಬಂದಿದೆ. ನಾಗರ ಪಂಚಮಿಗೆ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನವಿದೆ. ನಾಗರ ಪಂಚಮಿಯಂದು ನಾಗದೇವನ ಆರಾಧನೆ, ಪೂಜೆ ನಡೆಯುತ್ತದೆ. ವೃತವನ್ನು ಮಾಡಿ ಭಕ್ತರು ಭಯ-ಭಕ್ತಿಯಿಂದ ಪೂಜೆ ಮಾಡ್ತಾರೆ.

ನಾಗರ ಪಂಚಮಿಯನ್ನು ನಿಯಮದ ಪ್ರಕಾರ ಮಾಡಿದ್ರೆ ಯಶಸ್ಸು ಬೇಗ ಲಭಿಸುತ್ತದೆ ಎಂಬ ನಂಬಿಕೆಯಿದೆ. ನಾಗರ ಪಂಚಮಿ ದಿನ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ, ಮನೆಯ ಪೂಜಾ ಸ್ಥಳದಲ್ಲಿ ಸಗಣಿಯಿಂದ ನಾಗನನ್ನು ಮಾಡಿ. ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಳ್ಳಿ. ನಾಗ ದೇವನನ್ನು ಆಹ್ವಾನ ನೀಡಿ ಕುಳಿತುಕೊಳ್ಳಲು ಆಸನ ನೀಡಿ.

ನಂತ್ರ ನಾಗರಾಜನಿಗೆ ನೀರು, ಹೂ, ಶ್ರೀಗಂಧವನ್ನು ಅರ್ಪಿಸಿ. ಹಾಲು, ತುಪ್ಪ, ಮೊಸರು, ಜೇನುತುಪ್ಪ, ಸಕ್ಕರೆ ಬೆರೆಸಿ ಪಂಚಾಮೃತ ಮಾಡಿ. ಅದನ್ನು ನಾಗರ ಪ್ರತಿಮೆಗೆ ಅರ್ಪಿಸಿ. ನಂತ್ರ ಪ್ರತಿಮೆಗೆ ಗಂಧ, ನೀರನ್ನು ಹಾಕಿ. ನಂತ್ರ ಲಡ್ಡು ಅರ್ಪಿಸಿ. ಸುಗಂಧ ನಾಗನಿಗೆ ಪ್ರಿಯ. ಹಾಗಾಗಿ ಧೂಪ, ದೀಪಗಳಿಂದ ದೇವರ ಪೂಜೆ ಮಾಡಿ.

ನಾಗರಪಂಚಮಿ ಪೂಜೆಯಲ್ಲಿ ತಪ್ಪು ಆಗದಂತೆ ನೋಡಿಕೊಳ್ಳಿ. ಹಾಗಾಗಿ ಪೂಜೆಗೂ ಮುನ್ನ ನಿಮ್ಮ ಮನೆ ಪಂಡಿತರಿಂದ ಮಾಹಿತಿ ಪಡೆದು ಅಥವಾ ಪಂಡಿತರ ಸಮ್ಮುಖದಲ್ಲಿ ಪೂಜೆ ಮಾಡುವುದು ಒಳ್ಳೆಯದು. ಇದು ಸಾಧ್ಯವಾಗದೆ ಹೋದಲ್ಲಿ ನಾಗರ ಪಂಚಮಿಯಂದು ನಾಗ ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡಿಸುವುದು ಒಳ್ಳೆಯದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read