ವಿದ್ಯಾರ್ಥಿಗಳಿಗೆ ಈವರೆಗೂ ಸಮವಸ್ತ್ರ ವಿತರಿಸದಿರುವುದನ್ನು ಖಂಡಿಸಿ ಪುದುಚೇರಿಯ ಡಿಎಂಕೆ ಶಾಸಕರು ವಿನೂತನವಾಗಿ ಪ್ರತಿಭಟಿಸಿದ್ದಾರೆ. ಆರು ಮಂದಿ ಶಾಸಕರು ಶಾಲಾ ಸಮವಸ್ತ್ರ ಧರಿಸಿ ಬ್ಯಾಗ್ ಹಾಕಿಕೊಂಡು ಸೈಕಲ್ ಮೇಲೆ ಸದನಕ್ಕೆ ಬಂದಿದ್ದಾರೆ.
ಅಲ್ಲದೆ ಪುದುಚೇರಿಗೆ ರಾಜ್ಯ ಸ್ಥಾನಮಾನ ನೀಡುವ ಬೇಡಿಕೆಯೂ ಈ ಶಾಸಕರುಗಳದ್ದಾಗಿದ್ದು, ಈ ಕುರಿತಂತೆ ಸದನದಲ್ಲಿ ನಿರ್ಣಯ ತರುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಜೊತೆಗೆ ಘೋಷಣೆಗಳನ್ನು ಸಹ ಕೂಗಿದ್ದಾರೆ.
ಸದನದಲ್ಲಿ ಗದ್ದಲ ಆರಂಭವಾದಾಗ ಸ್ಪೀಕರ್ ಸೆಲ್ವಂ, ಶಾಂತ ರೀತಿಯಿಂದ ವರ್ತಿಸುವಂತೆ ಮನವಿ ಮಾಡಿದ್ದು, ನಂತರ ಎಲ್ಲ ಡಿಎಂಕೆ ಶಾಸಕರು ಸಭಾ ತ್ಯಾಗ ಮಾಡಿದ್ದರು. ಕೆಲ ಹೊತ್ತಿನ ಬಳಿಕ ವಾಪಸ್ ಬಂದ ಅವರುಗಳು ಕಲಾಪದಲ್ಲಿ ಪಾಲ್ಗೊಂಡಿದ್ದಾರೆ.
https://twitter.com/koushiktweets/status/1621386146734546945?ref_src=twsrc%5Etfw%7Ctwcamp%5Etweetembed%7Ctwterm%5E1621386146734546945%7Ctwgr%5Ecf10f0b04216ce5572bb60bce3f4c379da024a7b%7Ctwcon%5Es1_&ref_url=https%3A%2F%2Fd-3264279615512191107.ampproject.net%2F2301181928000%2Fframe.html