ರಾಜ್ಯದಲ್ಲಿ ‘ಡಿಕೆಶಿ ಬ್ರದರ್ಸ್’ ವಿಧ್ವಂಸಕ ಕೃತ್ಯಕ್ಕೆ ಹೊಂಚು ಹಾಕಿ ಸಿಕ್ಕಿಬಿದ್ದಿದ್ದಾರೆ : ಬಿಜೆಪಿ ವಾಗ್ಧಾಳಿ

ಬೆಂಗಳೂರು : ಬೆಂಗಳೂರಿನಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಬಂಧಿಸಿದ್ದು, ಬೆಂಗಳೂರನ್ನೇ ಟಾರ್ಗೆಟ್ ಮಾಡಿದ್ರು ಎಂಬ ಸ್ಪೋಟಕ ಮಾಹಿತಿ ಲಭ್ಯವಾಗಿದೆ.

ಈ ವಿಚಾರ ರಾಜಕೀಯ ಪಕ್ಷಗಳ ವಾಕ್ಸಮರಕ್ಕೂ ಕಾರಣವಾಗಿದ್ದು, ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ಧಾಳಿ ನಡೆಸಿದೆ. ರಾಜ್ಯದಲ್ಲಿ ‘ಡಿಕೆಶಿ ಬ್ರದರ್ಸ್’ ವಿಧ್ವಂಸಕ ಕೃತ್ಯಕ್ಕೆ ಹೊಂಚು ಹಾಕಿ ಸಿಕ್ಕಿಬಿದ್ದಿದ್ದಾರೆ ಎಂದು ಬಿಜೆಪಿ ವಾಗ್ಧಾಳಿ ನಡೆಸಿದೆ.

ಬೆಂಗಳೂರಿಗೆ ಬಾಂಬಿಡಲು ಮುಂದಾದವರ ರಕ್ಷಣೆ ರಾಜ್ಯ ಸರಕಾರ ಮಾಡದಿರಲಿ. ಕರ್ನಾಟಕದಲ್ಲಿ ಡಿಕೆಶಿ ಅವರ ‘ಬ್ರದರ್ಸ್’ ವಿಧ್ವಂಸಕ ಕೃತ್ಯ ಎಸೆಗಲು ಹೊಂಚು ಹಾಕಿ ಸಿಕ್ಕಿಬಿದ್ದಿದ್ದಾರೆ. ಸಿದ್ದರಾಮಯ್ಯ
ರವರ ತುಘಲಕ್ ಸರ್ಕಾರದ ಆಗಮನದಿಂದಾಗಿ ಮತಾಂಧ ಜಿಹಾದಿಗಳು ಉಗ್ರರ ಸಖ್ಯ ಬೆಳೆಸಿ ಬಾಲ ಬಿಚ್ಚಿದ್ದಾರೆ. ಕಾಂಗ್ರೆಸ್ ಇನ್ನಾದರೂ ತುಷ್ಟೀಕರಣ ರಾಜಕೀಯ ಬಿಟ್ಟು, ದೇಶದ ಭದ್ರತೆ, ಸುರಕ್ಷತೆಗೆ ಒತ್ತು ನೀಡಲಿ ಎಂದು ಬಿಜೆಪಿ ವಾಗ್ಧಾಳಿ ನಡೆಸಿದೆ.

https://twitter.com/BJP4Karnataka/status/1681519676223033345?ref_src=twsrc%5Egoogle%7Ctwcamp%5Eserp%7Ctwgr%5Etweet

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read