ಬಿಜೆಪಿಯವರ ಬಾಯಿಗೆ ಬೀಗ ಹಾಕಲು ಆಗುತ್ತಾ..? : ಡಿಸಿಎಂ ಡಿ.ಕೆ.ಶಿವಕುಮಾರ್ ಲೇವಡಿ

ಬೆಂಗಳೂರು: ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ ವಿಚಾರವಾಗಿ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಬಿಜೆಪಿಯವರ  ಬಾಯಿಗೆ  ಬೀಗ ಹಾಕಲು ಆಗುತ್ತಾ? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಬಿಜೆಪಿಯವರಿಗೆ ಬೀಗ ಹಾಕಲು ಆಗಲ್ಲ, ಈ ಹಿಂದೆಯೂ ಬೀಗ ಹಾಕಿಲ್ಲ, ಈಗಲು ಹಾಕಲ್ಲ. ಅವರ ನುಡಿಮುತ್ತುಗಳು, ಆಚಾರ ವಿಚಾರ ತೋರಿಸುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಇದೇ ವೇಳೆ ಕರ್ನಾಟಕದಿಂದ ತಮಿಳುನಾಡಿಗೆ ನೀರು ಬಿಡಲು ಆಗದ ವಿಚಾರವಾಗಿ ಮಾತನಾಡಿದ ಡಿ.ಕೆ.ಶಿವಕುಮಾರ್, ವಾಸ್ತಂವಾಂಶ ಅವರಿಗೆ ಗೊತ್ತಿಲ್ಲ ಎಂದು ಕಾಣಿಸುತ್ತದೆ. ಯಾವ ವಿಚಾರಕ್ಕೂ ಯುದ್ಧ ಮಾಡಲು ನಮಗೆ ಇಷ್ಟವಿಲ್ಲ. ಅವರೆಲ್ಲ ನಮ್ಮ ಬ್ರದರ್ಸ್. ತಮಿಳುನಾಡಿನವರು ಇಲ್ಲಿದ್ದಾರೆ, ಕರ್ನಾಟಕದವರೂ ತಮಿಳುನಾಡಿನಲ್ಲಿ ಕೆಲಸದಲ್ಲಿದ್ದಾರೆ. ಎರಡೂ ರಾಜ್ಯದವರು ಕುಳಿತು ಬಗೆಹರಿಸಿಕೊಳ್ಳೋಣ ಎಂಬುದು ನಮ್ಮ ಆಶಯ ಅಷ್ಟೇ ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read