Shocking Video | ದಪ್ಪಗಿದ್ದಾನೆಂದು ಟ್ರೆಡ್ ಮಿಲ್ ಮೇಲೆ ಓಡುವಂತೆ 6 ವರ್ಷದ ಮಗನಿಗೆ ಒತ್ತಾಯ; ತಂದೆಯ ಕ್ರೂರತೆಗೆ ಉಸಿರು ಚೆಲ್ಲಿದ ಕಂದ

ಮಗ ದಪ್ಪ ಇದ್ದಾನೆಂದು ತಂದೆ ಆತನನ್ನು ಟ್ರೆಡ್ ಮಿಲ್ ಮೇಲೆ ಓಡುವಂತೆ ಬಲವಂತ ಮಾಡಿದ್ದು ಇದರಿಂದ ಮಗು ಸಾವನ್ನಪ್ಪಿರುವ ದುರಂತ ಘಟನೆ ನ್ಯೂಜೆರ್ಸಿಯಲ್ಲಿ ನಡೆದಿದೆ. ಕಳೆದ ಮೂರು ವರ್ಷಗಳ ಹಿಂದೆ ನಡೆದ ಈ ಘಟನೆಗೆ ಸಂಬಂಧಿಸಿದಂತೆ ವಿಡಿಯೋ ಹೊರಬಿದ್ದಿದ್ದು ಈ ದೃಶ್ಯ ನೋಡಿದ ತಾಯಿ ಕೋರ್ಟ್ ನಲ್ಲಿ ಸಂಕಟದಿಂದ ಕಣ್ಣೀರು ಹಾಕಿದ್ದಾಳೆ.

ವಿಡಿಯೋದಲ್ಲಿ ಕಾಣಿಸಿಕೊಂಡಿರುವಂತೆ, ಮಗು ವೇಗವಾಗಿ ಓಡಲು ಹಿಂದೇಟು ಹಾಕಿದಾಗ ಮತ್ತು ಟ್ರೆಡ್ ಮಿಲ್ ನಿಂದ ಕೆಳಗೆ ಬಿದ್ದಾಗ ತಂದೆ ಆತನನ್ನು ಮತ್ತೆ ಮತ್ತೆ ಜೋರಾಗಿ ಓಡುವಂತೆ ಬಲವಂತ ಮಾಡಿದ್ದಾರೆ. ಇದರಿಂದ ಮಗುವಿನ ಕಾಲುಗಳಿಗೆ ನೋವಾಗಿದ್ದು ಓಡುವುದನ್ನು ವಿರೋಧಿಸಲು ಪ್ರಯತ್ನಿಸಿದಾಗ ತಂದೆ ಮಗನ ತಲೆಗೆ ಕಚ್ಚಿದ್ದಾನೆ.

ಮಗ ಟ್ರೆಡ್ ಮಿಲ್ ಮೇಲೆ ಓಡುವಂತೆ ತಂದೆ ಶಿಕ್ಷಿಸಿದ ಸಂಗತಿ ಏಪ್ರಿಲ್ 30 ರಂದು ನ್ಯಾಯಾಲಯದಲ್ಲಿ ಬಹಿರಂಗವಾಗಿದೆ. ಘಟನೆ ನಡೆದ ಕೆಲವೇ ದಿನಗಳಲ್ಲಿ ಬಾಲಕ ಮೃತಪಟ್ಟಿದ್ದು, 6 ವರ್ಷದ ಮಗುವಿನ ಸಾವಿನಲ್ಲಿ ತಂದೆಯ ಪಾತ್ರವಿದೆ ಎಂದು ಶಂಕಿಸಲಾಗಿದೆ. ಆರೋಪಿ ತಂದೆ 31 ವರ್ಷದ ಕ್ರಿಸ್ಟೋಫರ್ ಗ್ರೆಗರ್ ಎಂದು ಗುರುತಿಸಲಾಗಿದ್ದು, 2021 ರಲ್ಲಿ ತನ್ನ ಮಗ 6 ವರ್ಷದ ಕೋರೆ ಮಿಕ್ಕಿಯೊಲೊನನ್ನು ಕೊಂದ ಆರೋಪದ ಮೇಲೆ ವಿಚಾರಣೆ ಎದುರಿಸಿದ್ದಾರೆ.

ಘಟನೆಯ ವಿಡಿಯೋ ತುಣುಕನ್ನು ನ್ಯಾಯಾಲಯದಲ್ಲಿ ಪ್ಲೇ ಮಾಡಲಾಗಿದ್ದು ತಾಯಿ, ತನ್ನ ಮಗ ಸಾಯುವ ಕೆಲವು ದಿನಗಳ ಮುಂಚೆ ಎಂತಹ ನೋವನ್ನು ಅನುಭವಿಸಿದ್ದ ಎಂಬುದನ್ನು ನೋಡಿ ಕಣ್ಣೀರು ಹಾಕಿದ್ದಾರೆ.

ಓಷನ್ ಸಿಟಿಯ ಸುಪೀರಿಯರ್ ಕೋರ್ಟ್‌ನಲ್ಲಿ ವಿಚಾರಣೆ ನಡೆದಿದ್ದು 2021 ರ ಮಾರ್ಚ್ 20 ರಂದು ಅಟ್ಲಾಂಟಿಕ್ ಹೈಟ್ಸ್ ಕ್ಲಬ್‌ಹೌಸ್ ಫಿಟ್‌ನೆಸ್ ಸೆಂಟರ್‌ನಲ್ಲಿ ಘಟನೆ ನಡೆದಿದೆ. ಸ್ವಲ್ಪ ದಿನದ ನಂತರ ಬಾಲಕನಿಗೆ ಸಮಸ್ಯೆ ಕಾಣಿಸಿಕೊಂಡ ನಂತರ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಘಟನೆಯ ಒಂದೂವರೆ ವಾರದ ನಂತರ 2021ರ ಏಪ್ರಿಲ್ 2 ರಂದು ಬಾಲಕ ಮೃತಪಟ್ಟಿದ್ದ.

ವೀಡಿಯೋ ನೋಡಿದ ನೆಟಿಜನ್‌ಗಳು ಬೆಚ್ಚಿಬಿದ್ದಿದ್ದು ತಂದೆಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.

https://twitter.com/CollinRugg/status/1785686468243112256?ref_src=twsrc%5Etfw%7Ctwcamp%5Etweetembed%7Ctwterm%5E1785686468243112256%7Ctwgr%5E2058af7975cd4b5e486e8c2ea56ad01488296b0d%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fdisturbingvideo6yroldinnewjerseyforcedtorunontreadmillforbeingtoofatbittenbymonsterfatherashetiredlyfallsdiesdayslater-newsid-n605048096

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read