ಉತ್ತರ ಪ್ರದೇಶದ ಆಗ್ರಾದಲ್ಲಿ ಇತ್ತೀಚೆಗೆ ಮಹಿಳಾ ಹಾಗೂ ಪುರುಷ ಪೊಲೀಸ್ ನಡುವಿನ ಚಕ್ಕಂದದ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಮತ್ತೊಂದು ಅಂತಹುದೇ ಪ್ರಕರಣ ನಡೆದಿದ್ದು, ಪೊಲೀಸನೊಬ್ಬ ತನ್ನ ಗೆಳತಿಯ ಕೈಗೆ ಗನ್ ಕೊಟ್ಟು ರೀಲ್ಸ್ ಮಾಡಿದ್ದಾನೆ.
ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಮನೋಜ್ ಶರ್ಮಾ ಲಕ್ನೋ ಯುಪಿ ಎಂಬ ಖಾತೆಯಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದ್ದು, ಇದರಲ್ಲಿ ಪೊಲೀಸನ ಗನ್ ಅನ್ನು ಆತನ ಗೆಳತಿ ಹಿಡಿದುಕೊಂಡು ‘ಮೇರಾ ಬಾಲಮ್ ಠಾಣೆದಾರ್’ ಎಂಬ ಹಾಡಿಗೆ ರೀಲ್ಸ್ ಮಾಡಿದ್ದಾಳೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಪರ – ವಿರೋಧದ ಅಭಿಪ್ರಾಯಗಳು ಕೇಳಿ ಬರುತ್ತಿದ್ದು, ಆತನ ಖಾಸಗಿ ಜೀವನದ ವಿಡಿಯೋ ಈ ರೀತಿ ಬಹಿರಂಗ ಪಡಿಸಬಾರದಿತ್ತು ಎಂದು ಕೆಲವರು ಹೇಳಿದರೆ ಮತ್ತಷ್ಟು ಮಂದಿ ಸಮವಸ್ತ್ರದಲ್ಲಿರುವ ಈ ಪೊಲೀಸ್ ಅಧಿಕಾರಿ ಸರ್ಕಾರ ತನಗೆ ನೀಡಿದ್ದ ಗನ್ ಅನ್ನು ಗೆಳತಿಗೆ ನೀಡಿ ಕರ್ತವ್ಯ ಲೋಪ ಎಸಗಿದ್ದಾನೆ. ಹೀಗಾಗಿ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
https://twitter.com/ManojSh28986262/status/1820553750387577306?ref_src=twsrc%5Etfw%7Ctwcamp%5Etweetembed%7Ctwterm%5E1820553750387577306%7Ctwgr%5Edc534ab87f8ce0351c6fdac0bb126400c8835ae0%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fdnpindia-epaper-dh32aa52fd1e564d7ab912b538d71eaab2%2Fviralvideodisgracefulpolicemaninuniformhandspistoltogirlfriendandmakesreelpublicshocked-newsid-n625367364