ಮುನ್ನಾರ್‌ನಲ್ಲಿ KSRTC ಡಬಲ್ ಡೆಕ್ಕರ್ ಬಸ್‌; ನೆಟ್ಟಿಗರ ಆತಂಕ | Video

ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಮುನ್ನಾರ್‌ನಲ್ಲಿ ಪ್ರವಾಸಿಗರಿಗೆ ಸುಂದರ ನೋಟಗಳನ್ನು ಒದಗಿಸುವ ಸಲುವಾಗಿ ಹೊಸದಾಗಿ ಡಬಲ್ ಡೆಕ್ಕರ್ ಬಸ್‌ಗಳನ್ನು ಪ್ರಾರಂಭಿಸಿದೆ. ಆದರೆ ಈ ಬಸ್‌ಗಳ ಸಂಚಾರದ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

‘ಗೋ ಕೇರಳ’ ಎಂಬ X ಪುಟದಲ್ಲಿ ಹಂಚಿಕೊಂಡ ವೀಡಿಯೊ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಹೆಚ್ಚಿನ ಜನರು ಕೇರಳದ ಗಿರಿಧಾಮವಾದ ಮುನ್ನಾರ್‌ನ ರಸ್ತೆಗಳಲ್ಲಿ ಡಬಲ್ ಡೆಕ್ಕರ್ ಬಸ್‌ಗಳನ್ನು ನಿರ್ವಹಿಸುವಲ್ಲಿನ ಸಂಭಾವ್ಯ ಅಪಾಯಗಳ ಬಗ್ಗೆ ಮಾತನಾಡಿದರೆ, ಇತರರು ಬೋರ್ಡ್‌ನಲ್ಲಿ ಸವಾರಿ ಮಾಡಲು ಮತ್ತು ಪ್ರದೇಶದ ಸುಂದರ ನೋಟದಲ್ಲಿ ಮುಳುಗೇಳಲು ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ.

‘ಮುನ್ನಾರ್ ರಾಯಲ್ ವ್ಯೂ’ ಎಂದು ಹೆಸರಿಸಲಾದ ಈ ಬಸ್‌ಗಳು, ಚಹಾ ತೋಟಗಳು, ಎತ್ತರದ ಪ್ರದೇಶಗಳು ಮತ್ತು ಪ್ರವಾಸಿ ಆಕರ್ಷಣೆಗಳ 360 ಡಿಗ್ರಿ ನೋಟವನ್ನು ಜನರಿಗೆ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಈ ಬಸ್ ಮುನ್ನಾರ್-ದೇವಿಕುಲಂ ಮಾರ್ಗದಲ್ಲಿ ದಿನಕ್ಕೆ ನಾಲ್ಕು ಬಾರಿ ಸಂಚರಿಸಲಿದೆ.

ಆದರೆ, ಘಟ್ಟ ರಸ್ತೆಗಳಲ್ಲಿ ಡಬಲ್ ಡೆಕ್ಕರ್ ಕೋಚ್‌ಗಳ ಸುರಕ್ಷತೆಯ ಬಗ್ಗೆ ನೆಟ್ಟಿಗರು ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ರೀತಿಯ ಬಸ್‌ಗಳು ಘಟ್ಟ ರಸ್ತೆಗಳಲ್ಲಿ ಸುರಕ್ಷಿತವಲ್ಲ ಎಂದು ಅವರು ಹೇಳಿದ್ದಾರೆ. ಇದು ಅಪಘಾತಗಳಿಗೆ ಕಾರಣವಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು “ಅಪಾಯ ಕಾದಿದೆ” ಎಂದು X ಬಳಕೆದಾರರು ಬರೆದಿದ್ದಾರೆ.

“ನಾನು ತಜ್ಞನಲ್ಲ, ಆದರೆ ಮುನ್ನಾರ್ ರಸ್ತೆಗಳಲ್ಲಿ ಬಸ್ ಚಲಿಸಲು ಕಷ್ಟವಾಗುವುದಿಲ್ಲವೇ ? ಆ ಕಡಿದಾದ ತಿರುವುಗಳಲ್ಲಿ ಡಬಲ್ ಡೆಕ್ಕರ್ ಹೋಗುವುದು ಅಪಾಯಕ್ಕೆ ದಾರಿ ಮಾಡಿಕೊಡುತ್ತದೆ” ಎಂದು ಒಬ್ಬರು ಹೇಳಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read