ವೇದಿಕೆಯಲ್ಲಿ ಇದ್ದಕ್ಕಿದ್ದಂತೆ ಬಿಕ್ಕಿಬಿಕ್ಕಿ ಅತ್ತ ವಧು; ಸೋಷಿಯಲ್‌ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ ವಿಡಿಯೋ….!

ವಿವಾಹ ಸಮಾರಂಭದ ಹೃದಯ ವಿದ್ರಾವಕ ವೀಡಿಯೊ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ, ಈಗಾಗಲೇ ಈ ವಿಡಿಯೋ ಕೋಟ್ಯಾಂತರ ವೀಕ್ಷಣೆಗಳನ್ನು ಪಡೆದುಕೊಂಡಿರುವುದಲ್ಲದೇ ಸಾವಿರಾರು ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. tv1indialive ಖಾತೆಯಿಂದ Instagram ನಲ್ಲಿ ಹಂಚಿಕೊಂಡಿರುವ ಕ್ಲಿಪ್ ನಲ್ಲಿ ವಧು ಅನಿರೀಕ್ಷಿತವಾಗಿ ಕಣ್ಣೀರು ಹಾಕಿರುವುದು ಕಂಡು ಬರುತ್ತದೆ.

ಮೂರು ದಿನಗಳ ಹಿಂದಷ್ಟೇ ಅಪ್‌ಲೋಡ್ ಆಗಿರುವ ಈ ವಿಡಿಯೋ ಈಗಾಗಲೇ 1.38 ಕೋಟಿಗೂ ಅಧಿಕ ವೀಕ್ಷಣೆ ಹಾಗೂ 3 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ವಿಡಿಯೋದಲ್ಲಿ ವಧು ತನ್ನ ವರನ ಪಕ್ಕದಲ್ಲಿ ವೇದಿಕೆಯಲ್ಲಿ ಕುಳಿತಿರುವುದನ್ನು ಕಾಣಬಹುದು, ಅವರಿಬ್ಬರು ಹೂಮಾಲೆ ಬದಲಾಯಿಸಿದ ಕ್ಷಣಗಳ ನಂತರ ವಧು ಅನಿಯಂತ್ರಿತವಾಗಿ ಅಳಲು ಪ್ರಾರಂಭಿಸುತ್ತಾಳೆ, ಆಕೆಯ ಪಕ್ಕದಲ್ಲಿದ್ದವರೂ ದುಃಖಿತರಾದಂತೆ ಕಂಡು ಬರುತ್ತದೆ.

ಅವಳ ಸಹೋದರಿಯರು ಮತ್ತು ಸಂಬಂಧಿಕರು ವಧುವನ್ನು ಸಮಾಧಾನಪಡಿಸಲು ಧಾವಿಸಿದ್ದು, ಆದರೆ ವಧುವಿಗೆ ಅಳು ನಿಯಂತ್ರಿಸಲು ಸಾಧ್ಯವಾಗಿಲ್ಲ. ವರ ಸುಂದರವಾಗಿಲ್ಲ ಎಂಬ ಕಾರಣಕ್ಕೆ ಆಕೆ ಅಳುತ್ತಿರಬಹುದು ಎಂದು ಊಹಿಸಿರುವ ಹಲವರು, ಆಕೆಯ ತಂದೆ, ಮಗಳಿಗೆ ಇಷ್ಟವಿಲ್ಲದ ಮದುವೆ ಮಾಡಿದ್ದಾರೆಂದು ಟೀಕಿಸುತ್ತಿದ್ದಾರೆ. ನೀವೂ ಈ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ಹೇಳಿ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read