ಬ್ಯಾರೆಲ್ ಗಳ ಮೇಲೆ ಬೈಕ್​ ಓಡಿಸುವ ಸಾಹಸಿ: ಮೈ ಝುಂ ಎನ್ನುವ ವಿಡಿಯೋ ವೈರಲ್​

ಕೆಲವರು ಥ್ರಿಲ್‌ಗಾಗಿ, ಇನ್ನು ಕೆಲವರು ತಮ್ಮ ಹಸಿವನ್ನು ನೀಗಿಸಿಕೊಳ್ಳಲು ಯಾವುದೇ ಹಂತಕ್ಕೂ ಹೋಗಲು ರೆಡಿ ಇರುತ್ತಾರೆ. ತಮ್ಮ ಜೀವವನ್ನು ಪಣಕ್ಕಿಟ್ಟು ಸಾಹಸ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಾರೆ. ಅದರಲ್ಲಿಯೂ ಹೆಚ್ಚಾಗಿ ಬೈಕ್ ಸವಾರರು, ಸೈಕ್ಲಿಸ್ಟ್‌ಗಳು, ಪ್ಯಾರಾ ಜಂಪರ್‌ಗಳಂಥ ಸಾಹಸಿಗರು ಮೈ ಝುಂ ಎನಿಸುವ ಸಾಹಸಗಳನ್ನು ಮಾಡುತ್ತಾರೆ.

ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. ಯುವಕನೊಬ್ಬ ಪಿಟ್ ಬೈಕ್ ಅಥವಾ ಡರ್ಟ್ ಬೈಕ್‌ನಲ್ಲಿ ಸಾಹಸಮಯ ಕಾರ್ಯ ಮಾಡಿದ್ದಾನೆ. ಹಲವಾರು ಪ್ಲಾಸ್ಟಿಕ್ ಬ್ಯಾರೆಲ್‌ಗಳನ್ನು ಸಾಲಿನಲ್ಲಿ ಇರಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಬೈಕ್​ನಲ್ಲಿ ಬರುವ ಈ ಸಾಹಸಿ, ಮೊದಲಿಗೆ ಕ್ಯಾನ್‌ನಿಂದ ಸೋಡಾ ಕುಡಿದು ಬಾಟಲಿಯನ್ನು ಎಸೆಯುತ್ತಾನೆ. ನಂತರ ರುಂಯ್​ ಎಂದು ಬ್ಯಾರೆಲ್​ಗಳ ಮೇಲೆ ಬೈಕ್​ ಓಡಿಸುತ್ತಾನೆ.

ಬ್ಯಾರೆಲ್​ ತುದಿಗೆ ಬಂದಾಗ ಬೈಕ್​ ಸ್ಕಿಡ್​ ಆದಂತೆ ಕಾಣಿಸುತ್ತದೆ. ಆದರೆ ಅದು ಸ್ಕಿಡ್​ ಆಗಿದ್ದೋ ಅಥವಾ ಈತನೇ ಮಾಡಿದ್ದೋ ತಿಳಿದಿಲ್ಲ. ಆದರೂ ಸವಾರ ನಂತರ ಎದ್ದು ನಿಲ್ಲುತ್ತಾನೆ. ಬ್ಯಾರೆಲ್​ಗಳು ಜಾರುವ ಹಿನ್ನೆಲೆಯಲ್ಲಿ ಸ್ವಲ್ಪ ಹೆಚ್ಚೂ ಕಡಿಮೆಯಾದರೂ ಅಪಾಯ ತಪ್ಪಿದಲ್ಲ.

ಅಂಥದ್ದರಲ್ಲಿ ಈ ಸಾಹಸಿಗ ಮಾಡುವ ಕಾರ್ಯ ನೋಡಿದರೆ ಮೈ ನವಿರೇಳುತ್ತದೆ. ಟ್ವಿಟ್ಟರ್‌ನಲ್ಲಿ @_BestVideos ಮೂಲಕ ವಿಡಿಯೋ ಶೇರ್​ ಮಾಡಲಾಗಿದೆ. ಇದಕ್ಕೆ ಥರಹೇವಾರಿ ಕಮೆಂಟ್​ಗಳು ಬರುತ್ತಿವೆ. ಇಂಥ ಸಾಹಸವನ್ನು ಯಾರೂ ಮಾಡಬೇಡಿ, ಎಲ್ಲ ಸಂದರ್ಭಗಳೂ ಅನುಕೂಲಕರ ಆಗಿರುವುದಿಲ್ಲ ಎಂದು ಹಲವರು ತಿಳಿಸಿದ್ದಾರೆ.

https://twitter.com/_BestVideos/status/1617619839941750785?ref_src=twsrc%5Etfw%7Ctwcamp%5Etweetembed%7Ctwterm%5E1617619839941750785%7Ctwgr%5E4dcd5d781b2fc05abb74e7a86d47d002a6af581d%7Ctwcon%5Es1_&ref_url=https%3A%2F%2Fwww.india.com%2Fviral%2Fdirt-bike-rider-miraculously-survives-rash-stunt-without-injury-luck-might-not-favour-always-watch-viral-video-5871783%2F

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read