ಇಂತಹ ದಿನ ನೋಡಲು ನಾವು ದೇಶಕ್ಕಾಗಿ ಮೆಡಲ್ ಗೆದ್ದಿದ್ದಾ? ಕಣ್ಣೀರಿಟ್ಟ ಕುಸ್ತಿಪಟು ವಿನೇಶ್ ಫೋಗಟ್

ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟಿಸುತ್ತಿರುವ ಕುಸ್ತಿ ಪಟುಗಳ ಮೇಲೆ ದೆಹಲಿ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬುಧವಾರ ರಾತ್ರಿ ಪ್ರತಿಭಟನಾ ನಿರತ ಕುಸ್ತಿಪಟುಗಳ ಮೇಲೆ ದೆಹಲಿ ಪೊಲೀಸರ ವರ್ತನೆಯಿಂದ ಆಘಾತಕ್ಕೊಳಗಾದ ವಿನೇಶ್ ಫೋಗಟ್ ನಾವು ಅಪರಾಧಿಗಳಲ್ಲ ಮತ್ತು ಅಂತಹ ಅಗೌರವಕ್ಕೆ ಅರ್ಹರಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ರಾತ್ರಿ 11 ಗಂಟೆಯ ಸುಮಾರಿಗೆ ಜಂತರ್ ಮಂತರ್‌ನಲ್ಲಿ ಪ್ರತಿಭಟನಾ ನಿರತ ಕುಸ್ತಿಪಟುಗಳು ತಮ್ಮ ರಾತ್ರಿ ವಾಸ್ತವ್ಯಕ್ಕಾಗಿ ಹಾಸಿಗೆಗಳನ್ನು ತಂದಾಗ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಕುಸ್ತಿಪಟುಗಳ ಪ್ರಕಾರ ಪೊಲೀಸ್ ಅಧಿಕಾರಿಗಳು ಅವರೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದರು ಮತ್ತು ಮಹಿಳಾ ಕುಸ್ತಿಪಟುಗಳನ್ನು ನಿಂದಿಸಿದ್ದಾರೆ ಎನ್ನಲಾಗಿದೆ.

“ನೀವು ನಮ್ಮನ್ನು ಕೊಲ್ಲಲು ಬಯಸಿದರೆ ನಮ್ಮನ್ನು ಕೊಲ್ಲಿ, ಇಂತಹ ದಿನ ನೋಡಲು ನಾವು ದೇಶಕ್ಕೆ ಪದಕಗಳನ್ನು ಗೆದ್ದಿದ್ದೇವೆಯೇ? ನಾವು ಆಹಾರವನ್ನು ಸಹ ತಿನ್ನಲಿಲ್ಲ, ಪ್ರತಿಯೊಬ್ಬ ಪುರುಷನಿಗೆ ಮಹಿಳೆಯರನ್ನು ನಿಂದಿಸುವ ಹಕ್ಕಿದೆಯೇ? ಈ ಪೊಲೀಸರು ಬಂದೂಕು ಹಿಡಿದಿದ್ದಾರೆ. ನಮ್ಮನ್ನು ಸಾಯಿಸಿ,’’ ಎಂದು ಅಳುತ್ತಿದ್ದ ವಿನೇಶ್ ತಡರಾತ್ರಿ ಮಾಧ್ಯಮ ಸಂವಾದದಲ್ಲಿ ಹೇಳಿದರು.

“ನಮ್ಮನ್ನು ನಿಂದಿಸುವಾಗ ಮಹಿಳಾ ಪೊಲೀಸ್ ಅಧಿಕಾರಿಗಳು ಎಲ್ಲಿದ್ದರು ? ಪುರುಷ ಅಧಿಕಾರಿಗಳು ನಮ್ಮನ್ನು ಹೇಗೆ ತಳ್ಳುತ್ತಾರೆ ? ನಾವು ಅಪರಾಧಿಗಳಲ್ಲ. ಕುಡಿದ ಪೊಲೀಸ್ ಅಧಿಕಾರಿ ನನ್ನ ಸಹೋದರನಿಗೆ ಹೊಡೆದರು” ಎಂದು ವಿನೇಶ್ ಫೋಗಟ್ ಆರೋಪಿಸಿದರು.

ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಅಪ್ರಾಪ್ತರು ಸೇರಿದಂತೆ ಏಳು ಮಹಿಳಾ ಗ್ರಾಪ್ಲರ್‌ಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಕುಸ್ತಿಪಟುಗಳು ಏಪ್ರಿಲ್ 23 ರಿಂದ ಪ್ರತಿಭಟನೆಯಲ್ಲಿ ಕುಳಿತಿದ್ದಾರೆ.

Image credit: PTI

Image credit: PTI

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read