ಟರ್ಕಿಯಲ್ಲಿ ಸೋಮವಾರ ಸಂಭವಿಸಿದ 7.8 ತೀವ್ರತೆಯ ಭೂಕಂಪದಲ್ಲಿ ಕನಿಷ್ಠ ಆರು ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಬಲವಾದ ಕಂಪನದಲ್ಲಿ ಅನೇಕ ಕಟ್ಟಡಗಳು ನಾಶವಾಗಿದ್ದು, ಸಹಸ್ರಾರು ಮಂದಿ ಗಾಯಗೊಂಡಿದ್ದಾರೆ.
ಸೈಪ್ರಸ್, ಟರ್ಕಿ, ಗ್ರೀಸ್, ಜೋರ್ಡಾನ್, ಲೆಬನಾನ್, ಸಿರಿಯಾ, ಯುಕೆ, ಇರಾಕ್ ಮತ್ತು ಜಾರ್ಜಿಯಾ ಸೇರಿದಂತೆ ಇತರ ಕೆಲವು ದೇಶಗಳಲ್ಲಿ ಭೂಕಂಪದ ನಂತರದ ಕಂಪನವನ್ನು ಅನುಭವಿಸಲಾಯಿತು. ಕಟ್ಟಡಗಳು ಕುಸಿಯುತ್ತಿರುವುದು, ಸೂಪರ್ ಮಾರ್ಕೆಟ್ಗಳು ನಾಶವಾದುದನ್ನು ತೋರಿಸುವ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಆದರೆ ಇದೀಗ ಭೂಕಂಪ, ಸುನಾವಿಯಂಥ ವಿಪತ್ತುಗಳನ್ನು ಹಕ್ಕಿಗಳು ಮೊದಲೇ ಗ್ರಹಿಸುತ್ತವೆ ಎನ್ನುವುದಕ್ಕೆ ಟರ್ಕಿಯ ಈ ಘಟನೆಯೂ ಸಾಕ್ಷಿಯಾಗಿದೆ. ಟರ್ಕಿಯಲ್ಲಿನ ಹಕ್ಕಿಗಳು ಭೂಕಂಪಕ್ಕೂ ಮುನ್ನ ವಿಚಿತ್ರವಾಗಿ ವರ್ತಿಸಿರುವ ವಿಡಿಯೋ ವೈರಲ್ ಆಗಿದ್ದು, ಅವುಗಳು ಇದನ್ನು ಮೊದಲೇ ಅರಿತಿದ್ದವು ಎಂಬುದನ್ನು ತೋರಿಸುತ್ತದೆ.
https://twitter.com/OsintTV/status/1622590458353393665?ref_src=twsrc%5Etfw%7Ctwcamp%5Etweetembed%7Ctwterm%5E1622590458353393665%