ಕರ್ಣನ್ ಎಸ್ ನಿರ್ದೇಶನದ ರಾಕೇಶ್ ದಳವಾಯಿ ಅಭಿನಯದ ಬಹುನಿರೀಕ್ಷಿತ ‘ಧೀರ ಭಗತ್ ರಾಯ್’ ನಾಳೆ ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ. ಚಿತ್ರದುರ್ಗದಲ್ಲಿ ಅಲ್ಲು ಅರ್ಜುನ್ ಅಭಿನಯದ ಪುಷ್ಪ2 ಚಿತ್ರವನ್ನು ಬಿಡುಗಡೆ ಮಾಡದಂತೆ ತಡೆಗಟ್ಟಲಾಗಿದ್ದು, ಕರವೇ ನಾರಾಯಣ ಗೌಡರು ಕೂಡ ‘ಧೀರ ಭಗತ್ ರಾಯ್’ ಪರ ನಿಂತಿದ್ದಾರೆ.
ವೈಟ್ ಲೋಟಸ್ ಎಂಟರ್ಟೈನ್ಮೆಂಟ್ ಹಾಗೂ ಶ್ರೀ ಓಂ ಸಿನಿ ಕ್ರಿಯೇಶನ್ಸ್ ಎಂಟರ್ಟೈನರ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ರಾಕೇಶ್ ದಳವಾಯಿ ಸೇರಿದಂತೆ ಶರತ್ ಲೋಹಿತಾಶ್ವ, ಸುಚರಿತ ಸಹಾಯರಾಜ್, ಸಿದ್ಧಾರ್ಥ್ ಬಣ್ಣ ಹಚ್ಚಿದ್ದಾರೆ. ಎನ್ಎಂ ವಿಶ್ವ ಸಂಕಲನ, ಸೆಲ್ವಂ ಜಾನ್ ಛಾಯಾಗ್ರಹಣ ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ನಿರ್ದೇಶನವಿದೆ.