ಧಾರವಾಡ: ಎರಡು ಓಣಿಗಳ ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ ನಡೆದ ಶೋಭಾಯಾತ್ರೆ ಸಂದರ್ಭದಲ್ಲಿ ಡಿ.ಜೆ. ಸಂಗೀತ ಕಾರ್ಯಕ್ರಮದ ವಿಚಾರವಾಗಿ ಯುವಕರು ಗಲಾಟೆ ಮಾಡಿದ್ದು, ಪೊಲೀಸರು ಲಾಠಿ ಬೀಸಿರುವ ಘಟನೆ ಧಾರವಾಡದ ನರೇಂದ್ರ ಗ್ರಾಮದಲ್ಲಿ ನಡೆದಿದೆ.
ಪೊಲೀಸರು ಲಾಠಿ ಪ್ರಹಾರ ಮಾಡುತ್ತಿದ್ದಂತೆ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಎರಡೂ ಮೆರವಣಿಗೆಗಳು ಗ್ರಾಮದ ವೃತ್ತದ ಬಳಿ ಬಂದಾಗ ಯುವಕರು ಡಿ.ಜೆ.ಸಂಗೀತ ವಿಚಾರವಾಗಿ ಸ್ಪರ್ಧೆಗಿಳಿದಿದ್ದಾರೆ. ಯುವಕರ ಗುಂಪಿನ ನಡುವೆ ವಾಗ್ವಾದ ನಡೆದು ಗಲಾಟೆ ನಡೆದಿದೆ. ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಜನರನ್ನು ಚದುರಿಸಿದ ಬಳಿಕ ಎರಡೂ ಗಣೇಶ ಮೂರ್ತಿಗಳನ್ನು ವ್ಯವಸ್ಥಿತವಾಗಿ ವಿಸರ್ಜನೆ ಮಾಡಲಾಯಿತು.