ಮಂಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ತೋರಿಸಿದ್ದ 15ನೇ ಪಾಯಿಂಟ್ ನಲ್ಲಿ ಶೋಧಕಾರ್ಯ ಮುಕ್ತಾಯವಾಗಿದೆ.
ಶವಗಳನ್ನು ಹೂತಿಟ್ಟಿರುವುದಾಗಿ ದೂರುದಾರ ತೋರಿದ್ದ 13ನೇ ಪಾಯಿಂಟ್ ನಲ್ಲಿ ಶೋಧಕಾರ್ಯಾಚರಣೆ ನಡೆಸಬೇಕಿದ್ದ ಎಸ್ ಐಟಿ ತಂಡ ಇಂದು ದೂರುದಾರ ತೋರಿಸಿದ್ದ ಹೊಸ ಸ್ಥಳ 15ರಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಗೋಂಕ್ರಾಥಾರ್ ಪ್ರದೇಶದಲ್ಲಿ ಅಸ್ಥಿಪಂಜರಕ್ಕಾಗಿ ಶೋಧ ನಡೆಸಿದರೂ ಯಾವುದೇ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ದೂರುದಾರ ನೇತ್ರಾವತಿ ನದಿ ದಡದಲ್ಲಿ ಶವಗಳನ್ನು ಹೂತಿಟ್ಟಿರುವುದಾಗಿ 13 ಸ್ಥಳಗಳನ್ನು ತೋರಿಸಿದ್ದ. ಇಂದು 13ನೇ ಸ್ಥಳದಲ್ಲಿ ಶೋಧ ನಡೆಸಬೇಕಾಗಿತ್ತು. ಆದರೆ 13ನೇ ಸ್ಥಳವನ್ನು ಬಿಟ್ಟು ಇದೀಗ 15ನೇ ಸ್ಥಳದಲ್ಲಿ ಶೋಧಕಾರ್ಯಾಚರಣೆ ನಡೆಸಲಾಗಿದ್ದು, ಎಸ್ ಐಟಿ ನಡೆ ತೀವ್ರ ಕುತೂಹಲ ಮೂಡಿಸಿದೆ.