ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್ ಐಟಿ ಅಧಿಕಾರಿಗಳು ಅಸ್ಥಿಪಂಜರ ಶೋಧಕಾರ್ಯಾಚರಣೆಗೆ ತಾತ್ಕಾಲಿಕ ಬ್ರೇಕ್ ನೀಡಿದ್ದಾರೆ.
ಕಳೆದ 16 ದಿನಗಳಿಂದ ಎಸ್ ಐಟಿ ಅಧಿಕಾರಿಗಳು ದೂರುದಾರ ಮಾಸ್ಕ್ ಮೆನ್ ತೋರಿಸಿದ್ದ 17 ಜಾಗಗಳಲ್ಲಿ ನಿರಂತರ ಶೋಧ ಕಾರ್ಯಾಚರಣೆ ನಡೆಸಿತ್ತು. ಆರನೇ ಪಾಯಿಂಟ್ ಹೊರತುಪಡಿಸಿ ಬೇರಾವ ಜಾಗದಲ್ಲಿಯೂ ಅಸ್ಥಿಪಂಜರ ಪತ್ತೆಯಾಗಿಲ್ಲ. ಈ ನಡುವೆ ಎಸ್ ಐಟಿ ಅಧಿಕಾರಿಗಳು ಶೋಧಕಾರ್ಯಾಚರಣೆಗೆ ಬ್ರೇಕ್ ನೀಡಿದ್ದಾರೆ.
ಶೋಧಕಾರ್ಯಾಚರಣೆ ನಡೆದ ಬಗ್ಗೆ ಸಹಿ ಮಾಡಿಸಿಕೊಂಡಿರುವ ಎಸ್ ಐಟಿ ಅಧಿಕಾರಿಗಳನ್ನು ಕಾರ್ಮಿಕರನ್ನು ವಾಪಸ್ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.