ಮಂಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ಅಧಿಕಾರಿಗಳು ಅಂತಿಮ ಹಂತದ ತನಿಖೆ ನಡೆಸುತ್ತಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸುವ ನಿಟ್ಟಿನಲ್ಲಿ ಸಿದ್ಧತೆ ನಡೆಸಿದ್ದಾರೆ. ಈ ನಡುವೆ ಸಾಮಾಜಿಕ ಹೋರಾಟಗಾರ ಜಯಂತ್, ಮತ್ತೊಂದು ದೂರು, ಅರ್ಜಿಯೊಂದಿಗೆ ಎಸ್ ಐಟಿ ಠಾಣೆಗೆ ಆಗಮಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿರುವ ಎಸ್ ಐಟಿ ಠಾಣೆಗೆ ಆಗಮಿಸಿ 2010ರಲ್ಲಿ ನಡೆದಿದ್ದ ಮಹಿಳೆಯ ಕೊಲೆ ಪ್ರಕರಣ ಸಂಅಬ್ಂಧ ದೂರು ನೀಡಿದ್ದಾರೆ.
ಲಾದ್ಝ್ ವೊಂದರಲ್ಲಿ 35-40 ವರ್ಷ ವಯಸ್ಸಿನ ಮಹಿಳೆಯೊಬ್ಬರ ಶವ ಕೊಲೆಯಾದ ರೀತಿಯಲ್ಲಿ ಪತ್ತೆಯಗೈತ್ತು. ಕೊಲೆಯಾದ ದಿನವೇ ಅಂತ್ಯಕ್ರಿಯೆಯನ್ನು ಮಾಡಲಾಗಿದೆ. ಗುರುತು ಪತ್ತೆಯಾಗದಿದ್ದರೂ ಅಪರಿಚಿತ ಮಹಿಳೆಯ ಶವ ವಿಲೇವಾರಿ ಮಾಡಲಾಗಿದೆ. ಈ ಬಗ್ಗೆ ಆರ್ ಟಿ ಐ ಮೂಲಕ ದಾಖಲೆಗಳನ್ನು ಪಡೆದು ಠಾಣೆಗೆ ಆಗಮಿಸಿ ಜಯಂತ್ ದೂರು ನೀಡಿದ್ದಾರೆ. ಈ ಬಗ್ಗೆಯೂ ತನಿಖೆ ನಡೆಸುವಂತೆ ಕೋರಿದ್ದಾರೆ ಎಂದು ತಿಳಿದುಬಂದಿದೆ.