BIG NEWS: ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಆರೋಪ: ರಾಜ್ಯಾದ್ಯಂತ ಆಗಸ್ಟ್ 18ರಿಂದ ಒಂದು ವಾರ ಶಿವ ಪಂಚಾಕ್ಷರಿ ಜಪ ಪಠಣಕ್ಕೆ VHP ಕರೆ

ಬೆಂಗಳೂರು: ಧರ್ಮಸ್ಥಳದ ವಿರುದ್ಧ ಷಡ್ಯಂತ್ರ, ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿಸಿರುವ ವಿಶ್ವ ಹಿಂದೂ ಪರಿಷತ್, ರಾಜ್ಯಾದ್ಯಂತ ಶಿವ ಪಂಚಾಕ್ಷರು ಮಂತ್ರ ಪಠಣಕ್ಕೆ ಕರೆ ನೀಡಿದೆ.

ಆಗಸ್ಟ್ 18ರಿಂದ ಒಂದು ವಾರಗಳ ಕಾಲ ರಾಜ್ಯದ ಪ್ರತಿ ಮನೆ ಮನೆಗಳಲ್ಲಿ ಶಿವ ಪಂಚಾಕ್ಷರಿ ಜಪ ಪಠಣ ಮಾಡಿ ಅನುಷ್ಠಾನಕ್ಕೆ ತರುವಂತೆ ವಿ ಹೆಚ್ ಪಿ ಕರೆ ನೀಡಿದೆ.

ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ದೂರವಾಗಿ ಭಕ್ತಿ, ಶ್ರದ್ಧೆ ಹೆಚ್ಚಾಗಲಿ ಎಂದು ಸಂಕಲ್ಪ ಮಾಡಿ ರಾಜ್ಯಾದ್ಯಂತ ‘ಓಂ ನಮಃ ಶಿವಾಯ’ ಎಂಬ ಶಿವ ಪಂಚಾಕ್ಷರಿ ಮಂತ್ರ ಪಠಣ ಮಾಡಬೇಕು. ಧಾರ್ಮಿಕ ಸಂಘ-ಸಂಸ್ಥೆಗಳು, ದೇವಸ್ಥಾನಗಳಲ್ಲಿ ಜಪ ಮಾಡಲು ಮನವಿ ಮಾಡಿದೆ. ಮನೆಗಳಲ್ಲಿ ಸಾಮೂಹಿಕವಾಗಿ ಜಪ ಪಠಣ ಮಾಡುವಂತೆ ಕೋರಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read