ಬೆಂಗಳೂರು: ಬಿಜೆಪಿ ನಾಯಕರಿಂದ ಧರ್ಮಸ್ಥಳ ಚಲೋ ನಡೆದ ಬಳಿಕ ಇದೀಗ ಕಾಂಗ್ರೆಸ್ ಶಾಸಕರಿಂದಲೂ ಧರ್ಮಸ್ಥಳ ಚಲೋ ಆರಂಭವಾಗಿದೆ. ಕಾಂಗ್ರೆಸ್ ನಾಯರಿಂದ ಧರ್ಮಸ್ಥಳ ಭೇಟಿ ವಿಚಾರವಾಗಿ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸಿದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಮಂಜುನಾಥಸ್ವಾಮಿ ಯಾರೋ ಒಬ್ಬರಿಗೆ ಸೇರಿಲ್ಲ. ಎಲ್ಲರಿಗೂ ಬೇಕು. ಯಾರು ಬೇಕಾದರೂ ಹೋಗಿ ಮಂಜುನಾಥ ಸ್ವಾಮಿ ದರ್ಶನ್ ಅಮಾಡಬಹುದು. ಅದಕ್ಕೆ ಯಾರ ಆಕ್ಷೇಪವಿಲ್ಲ. ಆದರೆ ಧರ್ಮಸ್ಥಳ ಪ್ರಕರಣ ನಡೆದ ಬಳಿಕ ಈಗ ಭೇಟಿ ನೀಡುತ್ತಿರುವುದು ಯಾಕೆ? ಧರ್ಮಸ್ಥಳಕ್ಕೆ ಕಳಮ್ಕ ಅಂಟಿದೆ ಅಂತಾ ಹೋಗ್ತಿದ್ದಾರೋ? ಅಥವಾ ತಮ್ಮ ಕಳಂಕ ಕಳೆದುಕೊಳ್ಳಲು ಹೋಗ್ತಿದ್ದಾರೋ? ಗೊತ್ತಿಲ್ಲ ಎಂದು ಟಾಂಗ್ ನೀಡಿದರು.
ಬಿಜೆಪಿ, ಜೆಡಿಎಸ್ ನವರೇ ಇರಲಿ, ಈಗ ಕಾಂಗ್ರೆಸ್ ನವರು. ಈಗ ಯಾಕೆ ಹೋಗ್ತಿರೋದು? ಈ ಮೊದಲೇ ಯಾಕೆ ಹೋಗಲಿಲ್ಲ? ಸಹಜವಾಗಿ ಇದು ರಾಜಕೀಯ ಅನಿಸಿಕೊಳ್ಳುತ್ತೆ. ಅವರು ಹೋದರು ಅಂತಾ ಇವ್ರೂ ಹೋಗ್ತಿದ್ದಾರೆ ಅನಿಸುತ್ತೆ. ಧರ್ಮಸ್ಥಳಕ್ಕೆ ಕಳಂಕ ಅಂಟಿದೆ ಅಮ್ತಾ ಹೋಗ್ತಿದ್ದಾರೋ ಅಥವಾ ಇವರ ಕಳಂಕ ಕಳೆದುಕೊಳ್ಳಲು ಹೋಗ್ತಿದ್ದಾರೋ? ಗೊತ್ತಿಲ್ಲ. ಅವರು ದೇವರ ಮುಂದೆ ಏನು ಕೇಳಿಕೊಂಡಿರ್ತಾರೆ ಅಂತ ಯಾರಿಗೆ ಗೊತ್ತು? ಎಂದು ಹೇಳಿದರು.