BIG NEWS : ಸಿನಿಮಾ ರೂಪದಲ್ಲಿ ತೆರೆ ಮೇಲೆ ಬರಲಿದೆ ‘ಧರ್ಮಸ್ಥಳ ಫೈಲ್ಸ್’ : ಟೈಟಲ್ ನೋಂದಣಿ.!


ಬೆಂಗಳೂರು : ಧರ್ಮಸ್ಥಳ ಕೇಸ್ ರಾಜ್ಯಾದ್ಯಂತ ಭಾರಿ ಸುದ್ದಿಯಾಗುತ್ತಿದೆ. ಧರ್ಮಸ್ಥಳದಲ್ಲಿ ಶವಗಳನ್ನು ಹೂಳಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಎಸ್ ಐ ಟಿ ಕೂಡ ತನಿಖೆ ನಡೆಸುತ್ತಿದೆ. ಮುಂದೇನಾಗಲಿದೆ ಎಂಬ ಕುತೂಹಲ ಸದ್ಯಕ್ಕೆ ಎಲ್ಲರಲ್ಲಿದೆ. ಇದರ ನಡುವೆ ಸಿನಿಮಾ ರೂಪದಲ್ಲಿ ‘ಧರ್ಮಸ್ಥಳ ಫೈಲ್ಸ್’ ತೆರೆಗೆ ಬರಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ಹೌದು, ಎಸ್ ಐ ಟಿ ತನಿಖೆ ನಡೆಸುತ್ತಿರುವ ಹೊತ್ತಲ್ಲಿ ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ನಲ್ಲಿ ಧರ್ಮಸ್ಥಳ ಫೈಕ್ಸ್ ಎನ್ನುವ ಸಿನಿಮಾದ ಟೈಟಲ್ ರಿಜಿಸ್ಟರ್ ಆಗಿದೆ. ಸದ್ಯ, ಈ ಟೈಟಲ್ ಗೆ ಫಿಲ್ಮ್ ಚೇಂಬರ್ ಕೂಡ ಒಪ್ಪಿಗೆ ನೀಡಿದೆ ಎನ್ನಲಾಗಿದೆ.

ನೀವು ಕಾಶ್ಮೀರ್ ಫೈಲ್ಸ್ , ದಿ ಕೇರಳ ಸ್ಟೋರಿ ಚಿತ್ರ ನೋಡಿದ್ದೀರಾ..! ಈ ಸಿನಿಮಾ ನೈಜ ಘಟನೆಗಳನ್ನು ಆಧರಿಸಿತ್ತು, ಸಿನಿಮಾ ಒಳ್ಳೆ ಕಲೆಕ್ಷನ್ ಕೂಡ ಮಾಡಿತ್ತು. ಅದೇ ರೀತಿ ಧರ್ಮಸ್ಥಳ ಫೈಲ್ಸ್ ಕೂಡ ಬರಲಿದೆ. ನಿರ್ಮಾಪಕ ಎ ಗಣೇಶ್ ಅವರು ಸಿನಿಮಾ ನಿರ್ಮಿಸಲು ಮುಂದಾಗಿದ್ದಾರೆ. ಸದ್ಯ, ಈ ನಿರ್ಮಾಪಕರು ಟೈಟಲ್ ರಿಜಿಸ್ಟರ್ ಮಾಡಿಸಿದ್ದು, ನಿರ್ಮಾಪಕರು ಸಿನಿಮಾ ಮಾಡ್ತಾರಾ..? ಅಥವಾ ವೆಬ್ ಸೀರಿಸ್ ಮಾಡ್ತಾರಾ ಎಂಬುದು ಗೊತ್ತಿಲ್ಲ. ಮಲಯಾಳಂ ನಿರ್ದೇಶಕ ಕೆವಿ ಪ್ರಕಾಶ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ಸಿನಿಮಾದ ಘೋಷಣೆ ಬಗ್ಗೆ ಅಧಿಕೃತ ಮಾಹಿತಿ ತಿಳಿದು ಬರಬೇಕಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read