ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತಂಡ ನಡೆಸುತ್ತಿರುವ ಶೋಧಕಾರ್ಯ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಧರ್ಮಸ್ಥಳದ ನೇತ್ರಾವತಿ ನದಿ ತೀರದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ದೂರುದಾರ ತಪ್ಪೊಪ್ಪಿಕೊಂಡ ಪ್ರಕರಣದಲ್ಲಿ ಆತ ತೋರಿಸಿದ 13 ಸ್ಥಳಗಳಲ್ಲಿ ಮಣ್ಣು ಅಗೆದು ಅಸ್ಥಿಪಂಜರಗಳಿಗಾಗಿ ಶೋಧ ನಡೆಸಲಾಗುತ್ತಿದೆ. ಈವರೆಗೆ 6 ಸ್ಥಳಗಳಲ್ಲಿ ಶೋಧಕಾರ್ಯ ಮುಕ್ತಾಯಗೊಂಡಿದೆ. 6 ನೇ ಸ್ಥಳದಲ್ಲಿ ಪುರುಷನ ಮೃತದೇಹದ 10 ಮೂಳೆಗಳು ಪತ್ತೆಯಾಗಿವೆ. ತಲೆಬುರುಡೆ, ಕೈ-ಕಾಲಿನ ಮೂಳೆಗಳು ಸಿಕ್ಕಿವೆ.
ಮೂಳೆಗಳನ್ನು ವಶಕ್ಕೆ ಪಡೆದಿರುವ ಎಸ್ ಐಟಿ ತಂಡ ಎಫ್ ಎಸ್ ಎಲ್ ಗೆ ರವಾನಿಸಿದೆ. ಮತ್ತೊಂದೆಡೆ ನೇತ್ರಾವತಿ ನದಿ ದಡದಲ್ಲಿ ಇಂದು ನಾಲ್ಕನೇದಿನದ ಶೋಧಕಾರ್ಯ ಆರಂಭವಾಗಿದೆ.