BREAKING : ಧರ್ಮಸ್ಥಳ ಪ್ರಕರಣವನ್ನ ‘NIA’ ತನಿಖೆಗೆ ಕೊಡುವುದಿಲ್ಲ : ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ

ಬೆಂಗಳೂರು : ಧರ್ಮಸ್ಥಳ ಪ್ರಕರಣವನ್ನ ‘ಎನ್ ಐ ಎ’ ತನಿಖೆಗೆ ಕೊಡುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.

ಇಂದು ಸುದ್ದಿಗಾರರ ಜೊತೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್ ‘’ ಧರ್ಮಸ್ಥಳ ಪ್ರಕರಣವನ್ನ ‘ಎನ್ ಐ ಎ’ ತನಿಖೆಗೆ ಕೊಡುವುದಿಲ್ಲ , ಈಗಾಗಲೇ ಈ ತನಿಖೆಯನ್ನು ಎಸ್ ಐ ಟಿ ಮಾಡುತ್ತಿದೆ ಎಂದರು. ಎನ್ ಐ ಎ ತನಿಖೆ ಮಾಡೋದಿದ್ರೆ ಮಾಡಲಿ, ನಮ್ಮ ಅಭ್ಯಂತರ ಏನೂ ಇಲ್ಲ ಎಂದರು.

ಸೌಜನ್ಯ ನಿವಾಸಕ್ಕೆ ಬಿಜೆಪಿ ನಾಯಕರು ಭೇಟಿ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಅವರ ಉದ್ದೇಶ ಏನು ಇದೆಯೋ ಗೊತ್ತಿಲ್ಲ. ಈ ಪ್ರಕರಣದ ತನಿಖೆಯಲ್ಲಿ ತಪ್ಪಿದ್ದರೆ ಇನ್ನೊಂದು ಏಜೆನ್ಸಿ ಬರುತ್ತದೆ. ಧರ್ಮಸ್ಥಳ ಪ್ರಕರಣವನ್ನ ‘ಎನ್ ಐ ಎ’ ತನಿಖೆಗೆ ಕೊಡುವುದಿಲ್ಲ , ಎನ್ ಐ ಎ ತನಿಖೆ ಮಾಡೋದಿದ್ರೆ ಮಾಡಲಿ, ನಮ್ಮ ಅಭ್ಯಂತರ ಏನೂ ಇಲ್ಲ ಎಂದರು

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read