ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಮಹಿಳೆಯರ ಮೇಲಿನ ದೌರ್ಜನ್ಯ, ಕೊಲೆ ಪ್ರಕರಣಗಳ ತನಿಖೆಗೆ ಎಸ್ಐಟಿ ರಚಿಸಿದ್ದು ಸಮಗ್ರ ತನಿಖೆ ತಾರ್ಕಿಕ ಅಂತ್ಯ ಕಾಣುವವರೆಗೆ ಎಸ್ಐಟಿ ಮುಂದುವರಿಸಬೇಕೆಂದು ‘ಕೊಂದವರು ಯಾರು ಆಂದೋಲನ’ ನಿಯೋಗದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ.
ಮುಖ್ಯಮಂತ್ರಿಗಳ ನಿವಾಸ ‘ಕಾವೇರಿ’ಯಲ್ಲಿ ನಿಯೋಗದವರು ಸಿಎಂ ಭೇಟಿ ಮಾಡಿ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಮುಂದುವರೆಸಬೇಕು. ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಮಹಿಳೆಯರ ಮೇಲಿನ ಎಲ್ಲ ದೌರ್ಜನ್ಯ ಪ್ರಕರಣಗಳನ್ನು ತಾರ್ಕಿಕ ಅಂತ್ಯ ಮುಟ್ಟುವವರೆಗೂ ಎಸ್ಐಟಿ ಮುಂದುವರೆಸಬೇಕು. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಲಾಗಿದೆ.
ನಿಯೋಗದಲ್ಲಿ ಚಂಪಾವತಿ, ಮಲ್ಲಿಗೆ ಸಿರಿಮನೆ, ಸುಜಾತಾ, ಗೌರಮ್ಮ, ಮಾಯಾ ರಾವ್ ಮೊದಲಾದವರು ಇದ್ದರು.
ವಿವಿಧ ಮಹಿಳಾ ಸಂಘಟನೆಗಳ ಸದಸ್ಯರು, ಲೇಖಕಿಯರು ಹಾಗೂ ಮಹಿಳಾ ಹೋರಾಟಗಾರ್ತಿಯರ ನಿಯೋಗದವರು ಇಂದು ನನ್ನನ್ನು ಭೇಟಿಯಾಗಿ ಧರ್ಮಸ್ಥಳ ಪ್ರಕರಣದ ಎಸ್ಐಟಿ ತನಿಖೆಯ ಕುರಿತು ಚರ್ಚೆ ನಡೆಸಿ, ಬಳಿಕ ಮನವಿಪತ್ರವನ್ನು ಸಲ್ಲಿಸಿದರು. pic.twitter.com/hd5w3WOUpw
— Siddaramaiah (@siddaramaiah) October 21, 2025