ಮಂಗಳೂರು: ಧರ್ಮಸ್ಥಳ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸ್ ಐಟಿ ಅಧಿಕಾರಿಗಳು ಕಾಣದ ಕೈಗಳ ಬೆನ್ನು ಹತ್ತಿದ್ದಾರೆ. ಧರ್ಮಸ್ಥಳ ಪ್ರಕರಣದಲ್ಲಿ ಫಂಡಿಂಗ್ ಆಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ಹಣಕಾಸು ವ್ಯವಸ್ಥೆ ಮಾಡಿದವರ ಬೆನ್ನು ಬಿದ್ದಿರುವ ಎಸ್ ಐಟಿ ಅಧಿಕಾರಿಗಳು ಚಿನ್ನಯ್ಯ ಹಾಗೂ ಅವರ ಪತ್ನಿಯ ಅಗೌಂಟ್ ಗೆ ಹಣ ವರ್ಗಾವಣೆಯಾಗಿರುವ ಬಗ್ಗೆ ಹಾಗೂ ಯಾರಿಂದ ಹಣ ವರ್ಗಾವಣೆಯಾಗಿದೆ ಎಂಬ ಬಗ್ಗೆ ದಾಖಲೆ ಸಂಗ್ರಹಿಸಿದ್ದಾರೆ. ಚಿನ್ನಯ್ಯ ಕುಟುಂಬದ ಪ್ರತಿಯೊಬ್ಬರ ಖಾತೆ ಪರಿಶೀಲನೆ ನಡೆಸಿದ್ದಾರೆ.
ಫಂಡಿಂಗ್ ಆರೋಪದಲ್ಲಿ ತಿಮರೋಡಿ ಬೆಂಬಲಿಗರು ಸೇರಿ 11 ಜನರಿಗೆ ನೋಟಿಸ್ ನೀಡಿದ್ದಾರೆ. ಹಣ ವರ್ಗಾವಣೆ ಬಗ್ಗೆ ಮಹತ್ವದ ದಾಖಲೆ ಕಲೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.