BREAKING : ಧರ್ಮಸ್ಥಳ ಕೇಸ್ : ಬಂಧನದ ಬೆನ್ನಲ್ಲೇ ದೂರುದಾರ ‘ಮಾಸ್ಕ್ ಮ್ಯಾನ್’ ಹೆಸರು ರಿವೀಲ್.!

ಧರ್ಮಸ್ಥಳ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಮಾಸ್ಕ್ ಮ್ಯಾನ್ ಬಂಧನದ ಬೆನ್ನಲ್ಲೇ ಆತನ ಹೆಸರು ರಿವೀಲ್ ಆಗಿದೆ.

ಮಾಸ್ಕ್ ಮ್ಯಾನ್ ಹೆಸರು ಸಿ.ಎನ್ ಚಿನ್ನಯ್ಯ ಎಂಬುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಧರ್ಮಸ್ಥಳ ಕೇಸ್ ಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ನೀಡಿದ ಆರೋಪದಡಿ ಮಾಸ್ಕ್ ಮ್ಯಾನ್ ಸಿ ಎನ್.ಚಿನ್ನಯ್ಯನ್ನು ಪೊಲೀಸರು ವಶಕ್ಕೆ ಪಡೆದು ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ.

ಧರ್ಮಸ್ಥಳ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಎಸ್ ಐ ಟಿ ಇಂದು ದೂರುದಾರ ಮಾಸ್ಕ್ ಮ್ಯಾನ್ ಬಂಧಿಸಿದೆ.ಮಾಸ್ಕ್ ಮ್ಯಾನ್  ಬಂಧಿಸಿರುವ ಎಸ್ ಐ ಟಿ (SIT) ಇಂದು ಕೋರ್ಟ್ ಗೆ ಹಾಜರುಪಡಿಸಲಿದೆ.ಸುದೀರ್ಘ ವಿಚಾರಣೆ ಬಳಿಕ ಎಸ್ ಐ ಟಿ ಇಂದು ಮಾಸ್ಕ್ ಮ್ಯಾನ್ ನನ್ನು ಬಂಧಿಸಿದೆ.

ಧರ್ಮಸ್ಥಳದಲ್ಲಿ ನೂರಾರು ಶವ ಹೂಳಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಿನ್ನೆ ಬೆಳಗ್ಗೆ 10 ಗಂಟೆಯಿಂದ ಇಂದು ಬೆಳಗ್ಗೆವರೆಗೆ ಮಾಸ್ಕ್ ಮ್ಯಾನ್ ನ ತೀವ್ರ ವಿಚಾರಣೆ ನಡೆಸಲಾಗಿತ್ತು. ಇಂದು ಎಸ್ ಐ ಟಿ ಮಾಸ್ಕ್ ಮ್ಯಾನ್ ನನ್ನು ಬಂಧಿಸಿದೆ. ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟಿರುವುದಾಗಿ ದೂರುದಾರ ತಪ್ಪೊಪ್ಪಿಗೆ ಹೇಳಿಕೆ ನೀಡಿದ ಹಿನ್ನೆಲೆ ಎಸ್ ಐ ಟಿ ತೀವ್ರ ಶೋಧ ನಡೆಸಿತ್ತು.ನಂತರ ಈತನ ಆರೋಪ ಸುಳ್ಳು ಎಂದು ಸಾಬೀತಾಗಿದ್ದವು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read