16 ಚಿನ್ನದ ಪದಕ ಪಡೆದ ಕೋಲಾರ ವಿದ್ಯಾರ್ಥಿನಿ

ಬಾಗಲಕೋಟೆ: ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಗಿದೆ. ಕೋಲಾರ ಜಿಲ್ಲೆಯ ಸುಗಟೂರು ಗ್ರಾಮದ ಧರಣಿ ಶೆಟ್ಟಿ 16 ಚಿನ್ನದ ಪದಕ ಪಡೆದಿದ್ದಾರೆ.

ಕೃಷಿ ಬಗ್ಗೆ ಆಸಕ್ತಿ ಹೊಂದಿದ ವಿದ್ಯಾರ್ಥಿನಿ ಧರಣಿ ಶೆಟ್ಟಿ ಬಿಎಸ್ಸಿ ಪದವಿಯಲ್ಲಿ 16 ಚಿನ್ನದ ಪದಕ ಗಳಿಸಿದ್ದಾರೆ. ದಿನಸಿ ವ್ಯಾಪಾರಿ ನಾಗೇಂದ್ರ ಶೆಟ್ಟಿ ಮತ್ತು ಸವಿತಾ ಶೆಟ್ಟಿ ಅವರ ಹಿರಿಯ ಪುತ್ರಿಯಾಗಿರುವ ಧರಣಿ ಕೋಲಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದು, ಎಸ್ಎಸ್ಎಲ್ಸಿಯಲ್ಲಿ ಶೇಕಡ 97, ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇಕಡ 95 ಅಂಕ ಪಡೆದಿದ್ದಾರೆ. ಯುಪಿಎಸ್ಸಿ ಪರೀಕ್ಷೆಗಾಗಿ ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿರುವ ಧರಣಿ ಶನಿವಾರ ನಡೆದ ತೋಟಗಾರಿಕೆ ವಿವಿ ಘಟಕೋತ್ಸವದಲ್ಲಿ 16 ಚಿನ್ನದ ಪದಕ ಪಡೆದು ಸಮಾರಂಭದ ಕೇಂದ್ರ ಬಿಂದುವಾಗಿದ್ದಾರೆ. ಅವರ ಸಾಧನೆಗೆ ಪೋಷಕರು, ಸ್ನೇಹಿತರು ಅಭಿನಂದಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read