BIG NEWS:‌ ತಿರುಪತಿ ದೇಗುಲ ಸಮೀಪದ ರಸ್ತೆಯಲ್ಲೇ ಧನುಷ್‌ ಸಿನೆಮಾ ಶೂಟಿಂಗ್, ಟ್ರಾಫಿಕ್‌ ಜಾಮ್‌ನಿಂದ ಕಂಗೆಟ್ಟ ಭಕ್ತರಿಂದ ಪೊಲೀಸರಿಗೆ ದೂರು….!

ದಕ್ಷಿಣದ ಸ್ಟಾರ್ ನಟ ಧನುಷ್ ಸಾರ್ವಜನಿಕರ ಕೆಂಗಣ್ಣಿಗೆ ತುತ್ತಾಗಿದ್ದಾರೆ. ಸದ್ಯ ಧನುಷ್‌ ಡಿ 51 ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ತಿರುಪತಿ ದೇವಸ್ಥಾನದ ಬಳಿಯೇ ಚಿತ್ರೀಕರಣ ನಡೆಯುತ್ತಿತ್ತು. ನಟ ಧನುಷ್‌ರನ್ನು ನೋಡಲು ಸಾವಿರಾರು ಜನ ರಸ್ತೆಯಲ್ಲಿ ಜಮಾಯಿಸಿದ್ದಾರೆ. ಇದರಿಂದಾಗಿ ದೇವಾಲಯದ ಬಳಿ ಟ್ರಾಫಿಕ್‌ ಜಾಮ್‌ ಉಂಟಾಗಿದೆ.

ತಿಮ್ಮಪ್ಪನ ದರ್ಶನಕ್ಕೆ ಬಂದಿದ್ದ ಕೆಲವು ಭಕ್ತರು ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಅಷ್ಟೇ ಅಲ್ಲ ಚಿತ್ರೀಕರಣವನ್ನು ಸ್ಥಗಿತ ಮಾಡಲಾಗಿದೆ. ಶೂಟಿಂಗ್‌ ಸೆಟ್‌ನಿಂದ ಧನುಷ್ ಅವರ ವಿಡಿಯೋ ಸಹ ವೈರಲ್‌ ಆಗಿದೆ.

ಧನುಷ್‌ ಆಗಮನದಿಂದಾಗಿ ತಿರುಪತಿಯಲ್ಲಿ ಭಾರೀ ಜನಸ್ತೋಮವೇ ನೆರೆದಿತ್ತು. ಗುಂಪಿನಲ್ಲಿದ್ದ ಕೆಲವರು ದೇವರ ದರ್ಶನಕ್ಕೆ ಬಂದಿದ್ದರೆ ಇನ್ನು ಕೆಲವರು ಧನುಷ್ ಶೂಟಿಂಗ್ ವೀಕ್ಷಿಸಲು ಜಮಾಯಿಸಿದ್ದರು. ಇದರಿಂದಾಗಿ ಉಂಟಾದ ಟ್ರಾಫಿಕ್ ಜಾಮ್‌ನಿಂದ ತಿಮ್ಮಪ್ಪನ ಭಕ್ತರು ಪರದಾಡುವಂತಾಗಿದೆ.

ಚಿತ್ರೀಕರಣದ ಹಿನ್ನೆಲೆಯಲ್ಲಿ ಭಕ್ತರು ಸಂಚರಿಸುವ ಮಾರ್ಗವನ್ನು ಬದಲಾಯಿಸಲಾಗಿತ್ತು. ಇನ್ನೊಂದು ಮಾರ್ಗವನ್ನು ಮುಚ್ಚಲಾಗಿತ್ತು. ರಸ್ತೆ ಬಂದ್‌ ಮಾಡಿದ್ದರಿಂದ ಜನರು ತೊಂದರೆ ಅನುಭವಿಸಿದ್ದಾರೆ. ಅನೇಕ ಭಕ್ತರು ಇದರಿಂದ ಅಸಮಾಧಾನಗೊಂಡಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಪೊಲೀಸರು ಶೂಟಿಂಗ್ ಸ್ಥಗಿತ ಮಾಡಿದ್ದಾರೆ.

ಧನುಷ್ ಅಭಿನಯದ ಕ್ಯಾಪ್ಟನ್ ಮಿಲ್ಲರ್ ಚಿತ್ರ ಜನವರಿ 12 ರಂದು ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಶಿವರಾಜ್ ಕುಮಾರ್ ಕೂಡ ನಟಿಸಿದ್ದಾರೆ. ಶೀಘ್ರದಲ್ಲೇ ಈ ಸಿನೆಮಾ OTT ವೇದಿಕೆಯಲ್ಲಿ ಬಿಡುಗಡೆಯಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read