ಲತಾ ಮಂಗೇಶ್ಕರ್‌ ಹಾಡಿಗೆ ತಾಯಿಯೊಂದಿಗೆ ದನಿಗೂಡಿಸಿದ ಧನಶ್ರೀ ವರ್ಮಾ

ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಮಡದಿ ಧನಶ್ರೀ ವರ್ಮಾ ಸಾಮಾಜಿಕ ಜಾಲತಾಣದಲ್ಲಿ ಸದಾ ತಮ್ಮ ಡ್ಯಾನ್ಸ್ ರೀಲ್ಸ್‌ಗಳಿಂದ ಖ್ಯಾತಿ ಪಡೆದಿದ್ದಾರೆ.

ಈ ಬಾರಿ ತಮ್ಮ ಗಾಯನ ಪ್ರತಿಭೆ ಮೆರೆಯಲು ಮುಂದಾದ ಧನಶ್ರೀ, ಲತಾ ಮಂಗೇಶ್ಕರ್‌ರ ’ಯೇ ದಿಲ್ ಔರ್‌ ಉನ್ಕೀ ನಿಗಾಹೋ ಕೇ ಸಾಯೇ’ ಹಾಡಿಗೆ ತಮ್ಮ ತಾಯಿಯೊಂದಿಗೆ ದನಿಗೂಡಿಸಿದ್ದಾರೆ. ಅಮ್ಮ-ಮಗಳ ಈ ವಿಡಿಯೋ ನೆಟ್ಟಿಗರ ಮನಸೂರೆಗೊಂಡಿದೆ. 1973ರ ಚಿತ್ರ ಪೇಮ್ ಪರ್ಬತ್‌ನಲ್ಲಿ ಈ ಹಾಡಿಗೆ ಲತಾ ಮಂಗೇಶ್ಕರ್‌ ದನಿ ನೀಡಿದ್ದಾರೆ.

“ಅಪಾರವಾದ ಪ್ರೀತಿ ಹಾಗೂ ಬೆಸುಗೆ,” ಎಂದು ಕ್ಯಾಪ್ಷನ್ ಕೊಟ್ಟು ತಮ್ಮ ತಾಯಿಯೊಂದಿಗೆ ಹಾಡಿರುವ ಈ ವಿಡಿಯೋ ಶೇರ್‌ ಮಾಡಿದ್ದಾರೆ ಧನಶ್ರೀ ವರ್ಮಾ.

https://youtu.be/Cw2i_Kppyq8

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read