ಹೆದ್ದಾರಿಗಳಲ್ಲಿ ಕಾರು ಅಥವಾ ಒಮ್ಮೊಮ್ಮೆ ಬಸ್ ತಳ್ಳುವುದನ್ನು ಸಾಮಾನ್ಯವಾಗಿ ಎಲ್ಲರೂ ಗಮನಿಸಿರುತ್ತಾರೆ. ಆದರೆ ಇಲ್ಲಿ ರೈಲನ್ನು ತಳ್ಳಲಾಗಿದೆ. ಇಂತಹದೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.
ಈ ಘಟನೆ ಉತ್ತರ ಪ್ರದೇಶದ ಬರೇಲಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ ಎಂದು ಹೇಳಲಾಗಿದ್ದು, ‘ರಿಪೋರ್ಟರ್ ಜಿ’ ಎಂಬ ಖಾತೆದಾರರು ಫೆಬ್ರವರಿ 22ರಂದು ಟ್ವಿಟರ್ ನಲ್ಲಿ ಇದನ್ನು ಶೇರ್ ಮಾಡಿದ್ದಾರೆ. ಆ ಬಳಿಕ ಲಕ್ಷಾಂತರ ವೀಕ್ಷಣೆಯೊಂದಿಗೆ ಇದು ವೈರಲ್ ಆಗಿದೆ.
ವಿಡಿಯೋದಲ್ಲಿ ಗಮನಿಸಿದಂತೆ ಆರು ಮಂದಿ ಫ್ಲಾಟ್ ಫಾರ್ಮ್ ಮೇಲೆ ನಿಂತು ರೈಲ್ವೆ ಎಂಜಿನ್ ತಳ್ಳುತ್ತಿದ್ದರೆ ಇನ್ನು ಹಳಿಗಳ ಮೇಲೆ ನಿಂತ ಇಬ್ಬರು ಹಿಂದಿನಿಂದ ತಳ್ಳಿದ್ದಾರೆ. ಯಾವ ಕಾರಣಕ್ಕಾಗಿ ಅವರು ರೈಲನ್ನು ತಳ್ಳುತ್ತಿದ್ದಾರೆ ಎಂಬುದು ತಿಳಿದು ಬಂದಿಲ್ಲ.
https://twitter.com/reporterjinews/status/1628230952102293504?ref_src=twsrc%5Etfw%7Ctwcamp%5Etweetembed%7Ctwterm%5E1628230952102293504%7Ctwgr%5Ecb54ebb53df52494f738c205e272a1a63b28ce37%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fdhaka-maar-people-push-the-train-wagon-in-at-ups-bareilly-railway-station-video-goes-viral