ಈ ದೇವಾಲಯದಲ್ಲಿ ಭಗವಂತನ ಕಣ್ಣುಗಳನ್ನು ನೋಡುವಂತಿಲ್ಲ ಭಕ್ತರು; ಈ ನಂಬಿಕೆಯ ಹಿಂದಿದೆ ಕುತೂಹಲಕಾರಿ ಸಂಗತಿ….!

ವೃಂದಾವನದಲ್ಲಿ ಬಂಕೆ ಬಿಹಾರಿಯ ಭವ್ಯವಾದ ದೇವಾಲಯವಿದೆ. ಇಲ್ಲಿಗೆ ದೂರದ ಊರುಗಳಿಂದ ಸಾವಿರಾರು ಭಕ್ತರು ಆಗಮಿಸ್ತಾರೆ. ಈ ದೇವಾಲಯದಲ್ಲಿ ಹಲವು ರಹಸ್ಯಗಳು ಅಡಗಿವೆ. ಇಲ್ಲಿ ಭಕ್ತರು ಬಂಕೆ ಬಿಹಾರಿಯ ಕಣ್ಣುಗಳನ್ನು ನೋಡುವಂತಿಲ್ಲ. ಭಕ್ತರು ಬಂಕೆ ಬಿಹಾರಿಯ ದರ್ಶನಕ್ಕೆ ಬರುತ್ತಿದ್ದಂತೆ ಆಗಾಗ ಪರದೆಯಿಂದ ದೇವರನ್ನು ಮುಚ್ಚಲಾಗುತ್ತದೆ.

ವಾಸ್ತವವಾಗಿ ಇದರ ಹಿಂದೆ ಕುತೂಹಲಕಾರಿ ಘಟನೆಯೊಂದಿದೆ. ಭಕ್ತರು ದೇವರ ದರ್ಶನಕ್ಕಾಗಿ ಹೋದಾಗ ಪ್ರತಿ ನಿಮಿಷವೂ ಪರದೆಯನ್ನು ಎಳೆಯಲಾಗುತ್ತದೆ. ಭಕ್ತ ದೇವರ ಕಣ್ಣುಗಳನ್ನು ನೋಡದಂತೆ ಮಾಡಲಾಗುತ್ತದೆ. ಭಕ್ತರು ದೇವರ ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ಬಂಕೆ ಬಿಹಾರಿ ಸಂತೋಷದಿಂದ ಆ ಭಕ್ತನೊಂದಿಗೆ ಅಲ್ಲಿಂದ ಹೊರಟು ಬಿಡುತ್ತಾರೆ ಎಂಬ ನಂಬಿಕೆಯಿದೆ.

ಒಮ್ಮೆ ರಾಜಸ್ಥಾನದ ರಾಜನೊಬ್ಬ ಬಂಕೆ ಬಿಹಾರಿಯ ದರ್ಶನಕ್ಕೆ ಬಂದಿದ್ದ. ಭಗವಂತನನ್ನು ದಿಟ್ಟಿಸಿ ನೋಡಿದ ರಾಜ ಅಲ್ಲಿಂದ ಹಿಂತಿರುಗಿದ. ಇದರ ಬೆನ್ನಲ್ಲೇ ಬಂಕೆ ಬಿಹಾರಿಯ ವಿಗ್ರಹವೂ ದೇವಾಲಯದಿಂದ ಕಣ್ಮರೆಯಾಯಿತು. ಈ ಘಟನೆಯಿಂದ ಎಲ್ಲರೂ ಆಶ್ಚರ್ಯಚಕಿತರಾದರು. ಬಂಕೆ ಬಿಹಾರಿ ತನ್ನ ಭಕ್ತನನ್ನೇ ಹಿಂಬಾಲಿಸಿದ್ದಾನೆ ಎಂಬುದು ಜನರ ಅರಿವಿಗೆ ಬಂದಿತ್ತು.

ಮತ್ತೆ ಪೂಜೆ-ಪುನಸ್ಕಾರಗಳನ್ನು ನಡೆಸಿ ದೇವಸ್ಥಾನದಲ್ಲಿ ಬಂಕೆ ಬಿಹಾರಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ಈ ಘಟನೆಯ ಬಳಿಕ ಭಕ್ತರು ದೇವರನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡದಂತೆ ಪರದೆ ಅಳವಡಿಸಲಾಗಿದೆ. ಅದನ್ನು ಪ್ರತಿ ನಿಮಿಷಕ್ಕೂ ಬಿಡಲಾಗುತ್ತದೆ.

 

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read