BREAKING: ರಾಜ್ಯ ಮಟ್ಟದ ಯುವಜನೋತ್ಸವ ಸ್ಪರ್ಧೆ ವಿಜೇತರ ವಿವರ ಪ್ರಕಟ

ದಾವಣಗೆರೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ದಾವಣಗೆರೆಯಲ್ಲಿ ಜನವರಿ 5 ಮತ್ತು 6 ರಂದು ನಡೆದ ರಾಜ್ಯ ಮಟ್ಟದ ಯುವಜನೋತ್ಸವ ಸ್ಪರ್ಧೆಗಳ ವಿಜೇತರ ವಿವರ ಪ್ರಕಟಿಸಲಾಗಿದೆ.

ಘೋಷಣೆ ಸ್ಪರ್ಧೆಯಲ್ಲಿ; ಬೆಂಗಳೂರು ನಗರ ಜಿಲ್ಲೆಯ ಚಂದನ್ ಎಂ ನಾಯ್ಕ ಪ್ರಥಮ ಸ್ಥಾನ, ಚಿಕ್ಕಮಗಳೂರಿನ ವರುಣ್ ಡಿ. ಆರ್ಯ ದ್ವಿತೀಯ ಸ್ಥಾನ, ಹಾಸನದ ದೇಶರಾಜ್ ಪರಿಪೂರ್ಣ ತೃತೀಯ ಸ್ಥಾನ ಪಡೆದಿರುತ್ತಾರೆ.

ಕವನ ರಚನೆ ಸ್ಪರ್ಧೆ; ಬೆಳಗಾವಿಯ ಶಾಂಭವಿ ಕುಶಪ್ಪ ತೇರ್ಲಿ ಪ್ರಥಮ ಸ್ಥಾನ, ಹಾಸನದ ಶೃತಿ ಎಸ್. ರಾಜ್ ದ್ವಿತೀಯ ಸ್ಥಾನ, ಉತ್ತರ ಕನ್ನಡದ ಅಸ್‍ಪಿಯಾ ಇರ್ಶಾದ್ ಅಹಮದ್ ಶೇಕ್ ತೃತೀಯ ಸ್ಥಾನ,

ಚಿತ್ರಕಲಾ ಸ್ಪರ್ಧೆ; ಗದಗ ವಿನುತ ಎನ್. ಅಕ್ಕಸಾಲಿಗ ಪ್ರಥಮ ಸ್ಥಾನ, ದಾವಣಗೆರೆಯ ಕಾರ್ತಿಕ್ ಆಲೂರು ದ್ವಿತೀಯ ಸ್ಥಾನ, ಉತ್ತರ ಕನ್ನಡದ ಪ್ರಶಾಂತ ಬಾರುಗೌಡ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

ಕಥೆ ಬರೆಯುವ ಸ್ಪರ್ಧೆ: ಹಾಸನದ ತೀರ್ಥ ಪೂವಯ್ಯ ಪ್ರಥಮ ಸ್ಥಾನ, ಚಿಕ್ಕಮಗಳೂರಿನ ಗಗನ್ ಎಸ್. ದ್ವಿತೀಯ ಸ್ಥಾನ, ರಾಮನಗರದ ರವಿಕುಮಾರ್ ಜಿ.ಕೆ. ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

ವಿಜ್ಞಾನ ವಸ್ತು ಪ್ರದರ್ಶನ: ಬಳ್ಳಾರಿಯ ಹರ್ಷ.ಜೆ.ಎನ್ ಮತ್ತು ತಂಡದವರು ಪ್ರಥಮ ಸ್ಥಾನ, ಮಡಿಕೇರಿ ಶ್ವೇತಾನ್.ಜಿ.ರಾಯ್ ದ್ವಿತೀಯ ಸ್ಥಾನ, ದಾವಣಗೆರೆಯ ಜೀವನ.ವಿ.ಜೆ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

 ಜನಪದ ಗೀತೆ ಸ್ಪರ್ಧೆ: ಮಂಡ್ಯ ಪ್ರಥಮ ಸ್ಥಾನ, ಬಾಗಲಕೋಟೆ ದ್ವಿತೀಯ ಸ್ಥಾನ, ಚಾಮರಾಜನಗರ ತೃತೀಯ ಸ್ಥಾನವನ್ನು ಪಡೆದಿದೆ.

   ಜಾನಪದ ನೃತ್ಯ ಸ್ಪರ್ಧೆ; ಮಂಡ್ಯ ಪ್ರಥಮ ಸ್ಥಾನ, ಉಡುಪಿ ದ್ವಿತೀಯ ಸ್ಥಾನ ಹಾಗೂ ಬಾಗಲಕೋಟೆ ತೃತೀಯ ಸ್ಥಾನವನ್ನು ಪಡೆದಿದೆ.

ಬಿಐಇಟಿ ಎಸ್.ಎಸ್.ಎಂ. ಸಾಂಸ್ಕೃತಿಕ ಭವನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read